ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

hoskote

ಹೊಸಕೋಟೆ,ಅ.10- ತಾಲ್ಲೂಕಿನ ಕಂಬಳಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಂಪಾಪುರ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಜೆಡಿಎಸ್‍ಹಾಗೂ ಬಿಜೆಪಿ ಪಕ್ಷಗಳಿಂದ ಡುಡಿದ ಹತ್ತಾರು ಕಾರ್ಯರ್ತರು ಅಡಳಿತದಿಂದ ಬೇಸತ್ತು ಶಾಸಕ ನಾಗರಾಜು ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.ದೂಂಗರಗಡ್ಡೆ ಶೇಷಪ್ಪನವರ ಕುಟುಂಬ ಮತ್ತು ಇತರರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಿ.ಪ್ರಸಾದ್, ಕಂಬಳಿಪುರ ಗ್ರಾಪಂ ಅಧ್ಯಕ್ಷ ಜಯ್ಯಮ್ಮಮುನಿವೆಂಕಟಪ್ಪ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.
ಶಾಸಕ ನಾಗರಾಜುರವರ ತಾಲ್ಲೂಕಿನ ಸಮಗ್ರ ಅಭಿವೃದಿ, ಜನಪ್ರಿಯತೆಯನ್ನು ನೋಡಿ ಯಾವುದೇ ಷರತ್ತಿಲ್ಲದೆ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರುವುದಾಗಿ ಶೇಷಪ್ಪ ತಿಳಿಸಿದರು. ನಂತg ಶಾಸಕ ನಾಗರಾಜು ಮಾತನಾಡಿ, ತಾಲ್ಲೂಕಿನಲ್ಲಿ 35 ವರ್ಷಗಳಲ್ಲಿ ಆಗದಿದ್ದ ಅಭಿವೃದ್ಧಿಯನ್ನು ಕೇವಲ ಮೂರು ವರ್ಷಗಳಲ್ಲಿ ನಮ್ಮ ಪಕ್ಷ ಮಾಡಿದೆ. ಮೂಲಭೂತ ಸೌಕರ್ಯಗಳನ್ನು ಮಾಡುವುದರ ಜೊತೆಗೆ ಪಕ್ಷತೀತವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.ದೂಂಗರಗಡ್ಡೆ ಶೇಷಪ್ಪ, ಮುನಿ ರಾಜಪ್ಪ, ಗಣೇಶ್, ಮುನಿಯಪ್ಪ, ಮಂಜುನಾಥ್, ಚನ್ನಪ್ಪ,ರಂಗನಾಥ್, ನಾಗರಾಜ್, ಮಲ್ಯಾಪುರ, ಬಜ್ಜಪ್ಪ, ಈರೇಗೌಡ, ಶಿವರಾಜ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin