ಬಿಜೆಪಿ ಚುನಾವಣಾ ಪ್ರಣಾಳಿಕೆಗಾಗಿ ಚಿಮೂ, ಸಿದ್ದಲಿಂಗಯ್ಯ ಸಲಹೆ ಪಡೆದ ಅಮಿತ್‍ ಷಾ

ಈ ಸುದ್ದಿಯನ್ನು ಶೇರ್ ಮಾಡಿ

amith-sha-chidananada-murty
ಬೆಂಗಳೂರು, ಏ.18-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಇಂದು ದಲಿತ ಕವಿ ಸಿದ್ದಲಿಂಗಯ್ಯ ಹಾಗೂ ಹಿರಿಯ ಸಂಶೋಧಕ ಎಂ.ಚಿದಾನಂದಮೂರ್ತಿ ಅವರ ಮನೆಗೆ ಭೇಟಿ ನೀಡಿ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅಂಶಗಳ ಬಗ್ಗೆ ಸಲಹೆಗಳನ್ನು ಪಡೆದರು. ರಾಜರಾಜೇಶ್ವರಿನಗರದಲ್ಲಿರುವ ದಲಿತ ಕವಿ ಸಿದ್ದಲಿಂಗಯ್ಯ ಅವರ ಮನೆಗೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಅವರೊಂದಿಗೆ ಅಮಿತ್‍ಷಾ ಭೇಟಿ ನೀಡಿದರು. ಅಮಿತ್ ಷಾ ಅವರಿಗೆ ಅಂಬೇಡ್ಕರ್ ಅವರ ಭಾವಚಿತ್ರ ನೀಡಿ ಸಿದ್ದಲಿಂಗಯ್ಯ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಸಂವಿಧಾನ ಬದಲಾಯಿಸಬೇಕೆಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ವಿರುದ್ಧ ಸಿದ್ದಲಿಂಗಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಪ್ರಗತಿಪರರ ಬಗ್ಗೆಯೂ ಅನಂತಕುಮಾರ್ ಹೆಗಡೆ ಲಘುವಾಗಿ ಮಾತನಾಡಿದ್ದಾರೆ. ಇನ್ನು ಮುಂದೆ ಈ ರೀತಿ ಮಾತನಾಡದಂತೆ ಸಲಹೆ ನೀಡಬೇಕೆಂದು ಸಿದ್ದಲಿಂಗಯ್ಯ ಅಮಿತ್ ಷಾರಲ್ಲಿ ಮನವಿ ಮಾಡಿದ್ದಾರೆ.

amith-sha--siddalingayya

ಪ್ರಣಾಳಿಕೆಯಲ್ಲಿ ದಲಿತರು ಹಿಂದುಳಿದ ವರ್ಗದವರ ಅನುಕೂಲಕ್ಕೆ ಹೆಚ್ಚು ಒತ್ತು ನೀಡುವಂತೆ ಕೋರಿದ್ದಾರೆ.  ನಂತರ ಅಮಿತ್ ಷಾ ವಿಜಯನಗರದ ಹಂಪಿನಗರದಲ್ಲಿರುವ ಸಂಶೋಧಕ ಚಿದಾನಂದಮೂರ್ತಿ ಅವರ ಮನೆಗೆ ಭೇಟಿ ನೀಡಿದರು.  ಈ ಸಂದರ್ಭದಲ್ಲಿ ನಾಡು, ನುಡಿ, ಭಾಷೆ, ಜಲದ ಬಗ್ಗೆ ಚರ್ಚಿಸಿದರು. ಕಾವೇರಿ ವಿಷಯದಲ್ಲಿ ನಮ್ಮ ಜನರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಈ ವೇಳೆ ಚಿಮೂ ಅಮಿತ್ ಷಾ ಅವರಲ್ಲಿ ಮನವಿ ಮಾಡಿದರು.

Facebook Comments

Sri Raghav

Admin