ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

13ಬಾಗಲಕೋಟ,ಫೆ.6- ಜಿಲ್ಲೆಯ ಮತಕ್ಷೇತ್ರದ ಶಿಕ್ಕೇರಿ ಶಿಗಿಕೇರಿ ಹಾಗೂ ನೀರಲಕೇರಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಶಾಸಕ ಎಚ್.ವೈ. ಮೇಟಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ಶಾಸಕ ಎಚ್.ವೈ. ಮೇಟಿ ಪಕ್ಷದ ಶಾಲು ಹೊದಿಸಿ ಎಲ್ಲರನ್ನು ಪಕ್ಷಕ್ಕೆ ಸ್ವಾಗತಿಸಿದರು. ಶಿಗಿಕೇರಿ ಶಿಕ್ಕೇರಿಯ ತಿಪ್ಪಣ್ಣ ಹೆರಕಣ್ಣವರ, ಪರಸುರಾಮ ಗಡದಿನ್ನಿ, ಶಶಿಕುಮಾರ ಹೆರಕಣ್ಣವರ, ಶ್ರೀಧರ ಹೆರಕಣ್ಣವರ, ಕಿರಣ ಹೆರಕಣ್ಣವರ, ಶ್ರೀಶೈಲ ಹೆರಕಣ್ಣವರ, ಶಂಕರ ಹೆರಕಣ್ಣವರ, ಮಂಜುನಾಥ ಹೆರಕಣ್ಣವರ, ವಿರೇಶ ಹೆರಕಣ್ಣವರ, ಕಲ್ಮೇಶ ಹೆರಕಣ್ಣವರ, ಮಲ್ಲಿಕಾರ್ಜುನ ಕಾತರಕಿ, ಮಳಿಯಪ್ಪ ತೆಗ್ಗಿನಮನಿ, ಶೇಕಪ್ಪ ಛಬ್ಬಿ ಹಾಗೂ ನೀರಲಕೇರಿ ಗ್ರಾಮದ ಎಸ್.ಡಿ.ಎಂಸಿ ಅಧ್ಯಕ್ಷ ರಂಗಪ್ಪ ಕೋರಿ, ಮಂಜು ಗುದಗಿ, ಬಸವರಾಜ ಸೊನ್ನದ, ಕರಬಸಪ್ಪ ಮಜ್ಜಗಿ ಅವರುಗಳು ಪಕ್ಷದ ತತ್ವ ಸಿದ್ದಾಂತ ಒಪ್ಪಿ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ. ಎಂ.ಎಸ್. ದಡ್ಡೇನವರ, ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಆರ್.ಎ. ಪಟ್ಟಣದ, ಹರಸಿಂಗಪ್ಪ ಲಮಾಣಿ, ಧಾವರಪ್ಪ ಲಮಾಣಿ, ನಗರಸಭೈ ಸದಸ್ಯ ಹನಮಂತ ರಾಕುಂಪಿ, ನಾಗರಾಜ ಹದ್ಲಿ, ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin