ಬಿಜೆಪಿ ನಾಯಕರ ಫೋಟೋಗಳಿಗೆ ಹಾರ ಹಾಕಿ ‘ಜನಸಾಮಾನ್ಯರ’ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

BJP--01

ಬೆಂಗಳೂರು, ಫೆ.3- ಉತ್ತರ ಕರ್ನಾಟಕ ಜನತೆಯ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ನಡೆಸುತ್ತಿರುವ ಕಳಸಾ ಬಂಡೂರಿ ಹೋರಾಟ ಶಾಶ್ವತವಾಗಿ ಅಂತ್ಯ ಕಾಣಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಲೇಬೇಕು ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಒತ್ತಾಯಿಸಿ ಜನಸಾಮಾನ್ಯರ ಪಕ್ಷದ ನೇತೃತ್ವದಲ್ಲಿ ಆರಂಭಗೊಂಡಿರುವ ಅಹೋ ರಾತ್ರಿ ಧರಣಿಯ 3 ನೇ ದಿನವಾದ ಇಂದು ಮಹದಾಯಿ ವಿವಾದ ಬಗೆಹರಿಸಲು ವಿಫಲರಾಗಿರುವ ಬಿಜೆಪಿ ಸಂಸದರ ವಿರುದ್ಧ ಫ್ರೀಡಂ ಪಾರ್ಕ್‍ನಲ್ಲಿಂದು ವಿನೂತನ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ನಾಯಕರ ಫೋಟೋಗಳಿಗೆ ಹಾರ ಹಾಕಿ ಪ್ರತಿಭಟಿಸಿದ್ದು ವಿಶೇಷವಾಗಿತ್ತು. ನಿನ್ನೆ ಪಕೋಡ ತಯಾರಿಸುವ ಮೂಲಕ ಪ್ರತಿಭಟನೆ ನಡೆಸಲಾಗಿತ್ತು.   ಪಕ್ಷದ ಅಧ್ಯಕ್ಷರಾದ ಅಯ್ಯಪ್ಪ , ವಿಜಯ್ ಕುಲಕರ್ಣಿ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Facebook Comments

Sri Raghav

Admin