ಬಿಜೆಪಿ ವಕ್ತಾರ ಹುದ್ದೆಯಿಂದ ಗೋ.ಮಧುಸೂದನ್ ಅವರಿಗೆ ಮತ್ತೆ ಗೇಟ್ ಪಾಸ್

ಈ ಸುದ್ದಿಯನ್ನು ಶೇರ್ ಮಾಡಿ

Go.Madhusudan

ಬೆಂಗಳೂರು, ಸೆ.23-ಬಿಜೆಪಿಯೊಳಗೆ ಉಂಟಾಗಿದ್ದ ಭಿನ್ನಮತಕ್ಕೆ ತೇಪೆ ಹಚ್ಚುವ ನಿಟ್ಟಿನಲ್ಲಿ ಕೇಂದ್ರ ವರಿಷ್ಠರು ಪಕ್ಷದ ವಕ್ತಾರರಾಗಿ ನೇಮಕಗೊಂಡಿದ್ದ ಗೋ.ಮಧುಸೂದನ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಗೋ.ಮಧುಸೂದನ್ ಅವರನ್ನು ಪಕ್ಷದ ವಕ್ತಾರರನ್ನಾಗಿ ನೇಮಿಸಿದ್ದರು. ಆದರೆ ಇಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇದನ್ನು ಹಿಂಪಡೆಯುವಂತೆ ಬಿಎಸ್‍ವೈಗೆ ಸೂಚಿಸಿರುವುದರಿಂದ ಪುನಃ ಮಧುಸೂದನ್‍ಗೆ ವಕ್ತಾರರ ಹುದ್ದೆ ಕೈತಪ್ಪಿದೆ. 15 ದಿನಗಳ ಹಿಂದೆಯಷ್ಟೆ ಪಕ್ಷದ ಮುಖಂಡರ ಜೊತೆಯೂ ಚರ್ಚಿಸದೆ ವಕ್ತಾರರ ಹುದ್ದೆ ನೀಡಲಾಗಿತ್ತು. ಇದಕ್ಕೆ ಪಕ್ಷದ ಕೆಲ ಪ್ರಮುಖರು ವಿರೋಧ ವ್ಯಕ್ತಪಡಿಸಿದ್ದರು. ಸಂಗೊಳ್ಳಿ ರಾಯಣ್ಣ ಬಿಗ್ರೇಡ್ ವಿವಾದ ಉಂಟಾದ ಸಂದರ್ಭದಲ್ಲಿ ಮಧುಸೂದನ್ ಅವರನ್ನು ಪಕ್ಷದ ಹುದ್ದೆಯಿಂದ ತೆಗೆದುಹಾಕಲಾಗಿತ್ತು.

Facebook Comments

Sri Raghav

Admin