ಬಿಜೆಪಿ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ : ರಾಹುಲ್ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Rahul--02

ನವದೆಹಲಿ, ಡಿ.28-ದೇಶದ ಸಂವಿಧಾನದ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಆ ಪಕ್ಷವು ತನ್ನ ರಾಜಕೀಯ ಅನುಕೂಲಕ್ಕಾಗಿ ಸುಳ್ಳನ್ನು ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು.  ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ರಾಹುಲ್, ತಮ್ಮ ಪಕ್ಷವು ಚುನಾವಣೆಗಳಲ್ಲಿ ನಷ್ಟ ಅನುಭವಿಸಿರಬಹುದು ಅಥವಾ ಸೋಲು ಕಂಡಿರಬಹುದು ಆದರೆ, ನಾವು ಎಂದಿಗೂ ಸತ್ಯವನ್ನು ಬಿಟ್ಟುಕೊಟ್ಟಿಲ್ಲ ಎಂದು ಹೇಳಿದರು. ಸತ್ಯವು ಕಾಂಗ್ರೆಸ್‍ನ ಮುಖ್ಯ ಧ್ಯೇಯವಾಗಿದ್ದರೆ, ರಾಜಕೀಯ ಪ್ರಯೋಜನಗಳಿಗಾಗಿ ಬಿಜೆಪಿ ಸುಳ್ಳಿನ ಕಂತೆಗಳನ್ನು ಸೃಷ್ಟಿಸುತ್ತಿದೆ ಎಂದು ರಾಹುಲ್ ಟೀಕಿಸಿದರು.

ಸಂವಿಧಾನ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯ ರಕ್ಷಿಸುವುದು ನಮ್ಮ ಕರ್ತವ್ಯ. ಎಂದು ರಾಹುಲ್ ಹೇಳಿದರು.  ಕಾಂಗ್ರೆಸ್‍ಗೆ ಭವ್ಯ ಮತ್ತು ವೈಭವದ ಇತಿಹಾಸವಿದೆ. ಸತ್ಯ ಎಂಬುದು ಪಕ್ಷದ ಅವಿಭಾಜ್ಯ ಅಂಗ. ಇದರ ರಕ್ಷಣೆಗೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಅವರು ಘೋಷಿಸಿದರು.

Facebook Comments

Sri Raghav

Admin