ಬಿಜೆಪಿ ಸಂಸದ ಪ್ರತಾಪ್ ಸಿಂಹ ಹತ್ಯೆಗೆ ಎರಡು ಬಾರಿ ಯತ್ನಿಸಿದ್ದ ರುದ್ರೇಶ್ ಹಂತಕರು..!

ಈ ಸುದ್ದಿಯನ್ನು ಶೇರ್ ಮಾಡಿ

Rudresh----02

ಬೆಂಗಳೂರು, ನ.2- ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಹಂತಕರು ಪೊಲೀಸರ ವಿಚಾರಣೆ ಸಮಯದಲ್ಲಿ ಸ್ಫೋಟಕ ಮಾಹಿತಿ ಹೊರಹಾಕಿದ್ದು, ಬಿಜೆಪಿ ಸಂಸದ ಪ್ರತಾಪ್ ಸಿಂಹ ಹತ್ಯೆಗೆ ಎರಡು ಬಾರಿ ಯತ್ನ ನಡೆಸಲಾಗಿತ್ತು ಎಂದು ಸತ್ಯ ಬಾಯ್ಬಿಟ್ಟಿದ್ದಾರೆ. ರುದ್ರೇಶ್ ಹಂತಕರು ಹಿಂದೂಪರ ಮುಖಂಡರು, ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿದ್ದರು ಎನ್ನಲಾಗಿದೆ. ಸೆ.16ರಂದು ಶಿವಾಜಿನಗರದಲ್ಲಿ ರುದ್ರೇಶ್‍ರನ್ನು ಕೊಂದಿದ್ದ ಹಂತಕರು ವಿರಚಾರಣೆ ಸಮಯದಲ್ಲಿ ಅನೇಕ ಮಾಹಿತಿಯನ್ನು ಹೊರ ಹಾಕುತ್ತಿದ್ದು, ನಮ್ಮ ಮೊದಲ ಟಾರ್ಗೆಟ್ ಆಗಿದ್ದವರು ಪ್ರತಾಪ್ ಸಿಂಹ ಎಂದಿದ್ದಾರೆ.

ಬಿಜೆಪಿ ಸಂಸದ ಪ್ರತಾಪ್ ಸಿಂಹ ಹತ್ಯೆಗೆ ಸಂಚು ರೂಪಿಸಿದ್ದ ರುದ್ರೇಶ್ ಹಂತಕರು, ಎರಡು ಬಾರಿ ಕೊಲೆಗೆ ಯತ್ನಿಸಿ, ವಿಫಲರಾಗಿದ್ದಾಗಿ ತನಿಖಾಧಿಕಾರಿಗಳ ಎದುರು ಬಾಯ್ಬಿಟ್ಟಿದ್ದಾರೆ.ಬಂಧಿತರ ಬಳಿ ಪ್ರತಾಪ್ ಸಿಂಹರ ಇತ್ತೀಚಿನ ಕಾರ್ಯಕ್ರಮಗಳ ಪಟ್ಟಿ ಇತ್ತು ಎನ್ನಲಾಗಿದೆ. ಇದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕಣ್ಣೂರಿನಲ್ಲಿ ಸ್ಕೆಚ್:

ರುದ್ರೇಶ್ ಕೊಲೆಗೆ ಸಂಚು ರೂಪಿತವಾಗಿದ್ದು, ಕೇರಳದ ಕಣ್ಣೂರಿನಲ್ಲಿ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.ಈ ರುದ್ರೇಶ್ ಹತ್ಯೆ ಸಂಚಿಗೆ ಆರೋಪಿಗಳು ಇಟ್ಟ ಹೆಸರು ಆಪರೇಷನ್ ಮುರ್ಗಾ ಉರ್ದುವಿನಲ್ಲಿ ಮುರ್ಗಾ ಅಂದ್ರೆ ಕೋಳಿ ಅಂತ ಅರ್ಥ. ಆಪರೇಷನ್ ಮುರ್ಗಾ ಎಂದು ಹೆಸರಿಟ್ಟ ಹಂತಕರು ರುದ್ರೇಶ್‍ನನ್ನು ಮುಗಿಸಲು ಮೊದಲೇ ಸ್ಕೆಚ್ ಹಾಕಿದ್ದರು. ಇದಕ್ಕೂ ಮೊದಲು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಪ್ರಾರ್ಥನಾ ಮಂದಿರವೊಂದರಲ್ಲಿ ಹತ್ಯೆ ಸಂಬಂಧ ಸಭೆ ನಡೆದಿತ್ತು. ಆ ಸಭೆಯಲ್ಲಿ ಹಿಂದೂ ಮುಖಂಡನೊಬ್ಬನ ಹತ್ಯೆಗೆ ಯೋಜನೆ ರೂಪಿಸಲಾಗಿತ್ತು.

ಅದರಂತೆ ಆ ಹಿಟ್ ಲಿಸ್ಟ್‍ನಲ್ಲಿ ಮೊದಲು ಬಂದ ಹೆಸರು ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್. ಶಿವಾಜಿನಗರದಲ್ಲಿ ಪ್ರಭಾವಿಯಾಗಿ ಬೆಳೆಯುತ್ತಿದ್ದ ರುದ್ರೇಶ್ ಮುಗಿಸಲು ಸಂಚು ರೂಪಿಸಿದ್ದರು.ಆ ಸಭೆಯಲ್ಲಿ 25ಕ್ಕೂ ಹೆಚ್ಚು ಜನ ರುದ್ರೇಶ್ ಹತ್ಯೆ ಮಾಡಲು ಒಪ್ಪಿಕೊಂಡಿದ್ದರು. ಇನ್ನು ರುದ್ರೇಶ್ ಹತ್ಯೆ ಆರೋಪಿಗಳ ಬೆನ್ನಿಗೆ ನಿಂತಿದ್ದು ಕೇರಳದ ಪ್ರಭಾವಿ ವ್ಯಕ್ತಿ ಎಂದು ತಿಳಿದು ಬಂದಿದೆ. ನಾಯಿಗಳ ಕುತ್ತಿಗೆ ಕತ್ತರಿಸುವಷ್ಟು ಸುಲಭವಾಗಿ ಕೊಲೆ ನಡೆ ಯಬೇಕು ಎಂದು ಸ್ಕೆಚ್ ಹಾಕಿದ್ದರು. ಇದಕ್ಕಾಗಿ ಕೇರಳದ ಕಣ್ಣೂರಿನ ಕಾಡುಗಳಲ್ಲಿ ತರಬೇತಿ ಪಡೆದಿದ್ದರು. ಬೈಕ್ ರೈಡ್ ಮಾಡುತ್ತ್ತ ನಾಯಿ ಕೊಲ್ಲುವ ತರಬೇತಿ ನಡೆಸಿದ್ದ ಹಂತಕರು, ಅದೇ ಮಾದರಿಯಲ್ಲೇ ಬೈಕ್‍ನಲ್ಲಿ ಬಂದು ನಾಯಿ ಕೊಲ್ಲುವಂತೆಯೇ ರುದ್ರೇಶ್ ಕತ್ತು ಕತ್ತರಿಸಿದ್ದರು.

ಸ್ಥಳೀಯರ ಕೈವಾಡ:

ರುದ್ರೇಶ್ ಹತ್ಯೆ ಪ್ರಕರಣ ಒಮ್ಮಿಂದೊಮ್ಮೆಲೆ ಟ್ವಿಸ್ಟ್ ಪಡೆದುಕೊಂಡಿದ್ದು, ಆತನ ಕೊಲೆಯ ಹಿಂದೆ ಕೆಲವು ಸ್ಥಳೀಯ ಮತೀಯ ಮುಖಂಡರ ಕೈವಾಡವಿರುವುದು ಬಹಿರಂಗಗೊಂಡಿದೆ.
ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಈ ವಿಷಯ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಕೆಲವು ಸ್ಥಳೀಯ ಮುಖಂಡರು ರುದ್ರೇಶನ ಕೊಲೆಗೈಯ್ಯಲು ಆರೋಪಿಗಳಿಗೆ ಹಣಕಾಸಿನ ನೆರವು ಮಾಡಿ ಕೇರಳದಲ್ಲಿ ತರಬೇತಿ ಕೊಡಿಸಿದ್ದರು. ಅಲ್ಲಿಂದ ತರಬೇತಿ ಪಡೆದುಕೊಂಡ ಬಂದ ಆರೋಪಿಗಳು ನವರಾತ್ರಿ ಸಮಯ ನೋಡಿ ರುದ್ರೇಶರನ್ನು ಹತ್ಯೆ ಮಾಡಲು ತರಬೇತಿಗೆ ಅವಕಾಶ ಮಾಡಿಕೊಟ್ಟಿದ್ದರು ಎನ್ನುವ ವಿಚಾರ ಈಗ ಬಹಿರಂಗಗೊಂಡಿದೆ.ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳು ಒಂದೊಂದೆ ವಿಚಾರವನ್ನು ಬಾಯ್ಬಿಡುತ್ತಿದ್ದಾರೆ.

ಹತ್ಯೆಗೆ ಒಳಗಾದ ರುದ್ರೇಶ್ ಮುಂಬರುವ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದರು. ತನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತ ಜನರ ವಿಶ್ವಾಸ ಗಳಿಸಿಕೊಂಡಿದ್ದರು. ಇದು ಕೆಲವು ಸ್ಥಳೀಯ ಮುಖಂಡರಿಗೆ ಸಹಿಸಲಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ರುದ್ರೇಶ್‍ರನ್ನು ಕೊಲೆ ಮಾಡುವ ಸಂಚು ರೂಪಿಸಿ, ಹಂತಕರ ಸಹಾಯದಿಂದ ಹತ್ಯೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆರ್‍ಎಸ್‍ಎಸ್ ಕಾರ್ಯಕರ್ತರು ನವರಾತ್ರಿ ಹಿನ್ನೆಲೆಯಲ್ಲಿ ಅ.16ರಂದು ಮುಂಜಾನೆ ಶಿವಾಜಿನಗರ, ಭಾರತೀನಗರ ಸುತ್ತಮುತ್ತಲ ರಸ್ತೆಗಳಲ್ಲಿ ಪಥಸಂಚಲನ ಮಾಡಿದ್ದರು. ಪಥ ಸಂಚಲನ ಮುಗಿದ ಬಳಿಕ ಸುಮಾರು 11.30ರ ವೇಳೆ ಬೆಳಗ್ಗೆ 11.30ರ ಸುಮಾರಿಗೆ ರುದ್ರೇಶ್ ಅವರು ಸ್ನೇಹಿತರಾದ ಜಯರಾಂ, ಕುಮಾರ್ ಹಾಗೂ ಹರೀಶ್ ಅವರ ಜತೆ ಕಾಮರಾಜ ರಸ್ತೆಯ ಬಿಇಒ ಕಚೇರಿ ಬಳಿ ಮಾತನಾಡುತ್ತ ನಿಂತಿದ್ದಾಗ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರುದ್ರೇಶ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು.

► Follow us on –  Facebook / Twitter  / Google+c

Facebook Comments

Sri Raghav

Admin