ಬಿಜೆಪಿ ಸೇರಿದ 400 ಟಿಎಂಸಿ ಸದಸ್ಯರು, ಮಮತಾಗೆ ಭಾರೀ ಹಿನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

mamata

ಅಗರ್ತಲ, ಮಾ.24-ಈಶಾನ್ಯ ರಾಜ್ಯ ತ್ರಿಪುರದಲ್ಲಿ ಭಾರತೀಯ ಜನತಾಪಕ್ಷಕ್ಕೆ ಭರ್ಜರಿ ಬೆಂಬಲ ಲಭಿಸಿದ್ದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‍ಗೆ (ಟಿಎಂಸಿ) ಭಾರೀ ಹಿನ್ನಡೆಯಾಗಿದೆ.   ರಾಜ್ಯ ರಾಜಕೀಯದ ಮಹತ್ವದ ಬೆಳವಣಿಗೆಯೊಂದರಲ್ಲಿ ಟಿಎಂಸಿ ರಾಜ್ಯ ಸಮಿತಿಯ ಒಟ್ಟು 65 ಸದಸ್ಯರಲ್ಲಿ 16 ಮಂದಿ ಮುಖಂಡರೂ ಸೇರಿದಂತೆ 400 ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.  ತೃಣಮೂಲ ಕಾಂಗ್ರೆಸ್‍ನ ತ್ರಿಪುರ ಘಟನಕದ ಮಾಜಿ ಅಧ್ಯಕ್ಷ ರತನ್ ಚಕ್ರವರ್ತಿ ಸೇರಿದಂತೆ ನಾಲ್ಕು ನೂರು ಮಂದಿ ಕಮಲ ಪಾಳಯಕ್ಕೆ ಜಿಗಿದಿದ್ದಾರೆ.

ತ್ರಿಪುರ ಬಿಜೆಪಿ ಘಟಕದ ಅಧ್ಯಕ್ಷ ವಿಪ್ಲವ್ ದೇವ್ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ರಾಜೇನ್ ಗೊಹೈನ್ ಟಿಎಂಪಿ ಸದಸ್ಯರನ್ನು ಪಕ್ಷಕ ಬರ ಮಾಡಿಕೊಂಡು ರತನ್ ಚಕವರ್ತಿ ಕೈಗೆ ಕೇಸರಿ ಧ್ವಜ ನೀಡಿದರು.   ನಂತರ ನಡೆದ ಸುದ್ದಿಗೋóಷ್ಠಿಯಲ್ಲಿ ಮಾತನಾಡಿದ ಚಕ್ರವರ್ತಿ. ಬಿಜೆಪಿಯಿಂದ ಮಾತ್ರ ಈಶಾನ್ಯ ರಾಜ್ಯದ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಾಧ್ಯ. ತ್ರಿಪುರಾದಲ್ಲಿ ಸಿಪಿಎಂ ದುರಾಡಳಿತದ ಕಪಿಮುಷ್ಠಿಯಿಂದ ರಾಜ್ಯವನ್ನು ಬಿಜೆಪಿ ಪಾರು ಮಾಡಿ, 2018ರಲ್ಲಿ ಸರ್ಕಾರ ರಚಿಸುತ್ತದೆ ಎಂಬ ವಿಶ್ವಾಸ ತಮಗಿರುವುದಾಗಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin