ಬಿಜೆಪಿ 2ನೇ ಪಟ್ಟಿ ಇಂದು ರಿಲೀಸ್, ಇಲ್ಲಿದೆ ನೋಡಿ ಫೈನಲ್ ಆಗಿರುವ ಅಭ್ಯರ್ಥಿಗಳ ಹೆಸರುಗಳು

ಈ ಸುದ್ದಿಯನ್ನು ಶೇರ್ ಮಾಡಿ

BJP-List--01

ಬೆಂಗಳೂರು,ಏ.15-ಬಹುನಿರೀಕ್ಷಿತ ಬಿಜೆಪಿಯ ಎರಡನೆ ಪಟ್ಟಿ ಇಂದು ಸಂಜೆ ಬಿಡುಗಡೆಯಾಗಲಿದೆ. ಬಿಡುಗಡೆಯಾಗಲಿರುವ ಎರಡನೇ ಹಂತದ ಪಟ್ಟಿಯಲ್ಲಿ 80ರಿಂದ 100 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲು ಕೇಂದ್ರ ನಾಯಕರು ತೀರ್ಮಾನಿಸಿದ್ದಾರೆ. ಈಗಾಗಲೇ ದೆಹಲಿಗೆ ದೌಡಾಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್‍ಕುಮಾರ್ ಅವರು ಇಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಿಡುಗಡೆ ಮಾಡಬೇಕಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಹಸ್ತಾಂತರ ಮಾಡಲಿದ್ದಾರೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜ್‍ನಾಥ್‍ಸಿಂಗ್, ಸುಷ್ಮಾಸ್ವರಾಜ್ ಸೇರಿದಂತೆ ಮತ್ತಿತರ ಸಂಸದೀಯ ಮಂಡಳಿ ನಾಯಕರು ಔಪಚಾರಿಕವಾಗಿ ಮಾತುಕತೆ ನಡೆಸಿ ಪಟ್ಟಿಗೆ ಒಪ್ಪಿಗೆ ಸೂಚಿಸಲಿದ್ದಾರೆ. ಇಂದು ಬಿಡುಗಡೆ ಮಾಡಲಿರುವ ಪಟ್ಟಿಯಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ 10ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡಿದ್ದವರನ್ನು ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ.

ಖಾಸಗಿ ಸಂಸ್ಥೆಗಳು ನಡೆಸಿರುವ ಸಮೀಕ್ಷೆ, ಜಿಲ್ಲಾವಾರು ಹಾಗೂ ರಾಜ್ಯ ಘಟಕದ ನಾಯಕರು ಶಿಫಾರಸು ಮಾಡಿರುವ ಪಟ್ಟಿಯನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.  ಈ ಪಟ್ಟಿಯಲ್ಲಿ ಮುಖ್ಯವಾಗಿ ಬೆಂಗಳೂರು ಮಹಾನಗರ, ಬೆಂಗಳೂರು ಗ್ರಾಮಾಂತರ, ಮಧ್ಯಕರ್ನಾಟಕ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕರಾವಲಿ ತೀರ ಪ್ರದೇಶಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ.  ಎರಡು ಅಥವಾ ಮೂರಕ್ಕಿಂತ ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರಗಳಲ್ಲಿ ಭಿನ್ನಮತ ಶಮನವಾದ ಮೇಲೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲು ಬಿಜೆಪಿ ಲೆಕ್ಕಾಚಾರ ಹಾಕಿದೆ. ಮೊಳಕಾಲ್ಮೂರು, ಬೆಂಗಳೂರಿನ ಚಿಕ್ಕಪೇಟೆ, ರಾಜರಾಜೇಶ್ವರಿನಗರ ಸೇರಿದಂತೆ ಮತ್ತಿತರ ಕಡೆ ಬಂಡಾಯದ ಬಿಸಿ ಜೋರಾಗಿರುವುದರಿಂದ ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಕೇಂದ್ರ ನಾಯಕರು ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ. ಇದಲ್ಲದೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರಾಬಲ್ಯವಿರುವ ಕೆಲವು ಕ್ಷೇತ್ರಗಳಿಗೆ ಅನ್ಯಪಕ್ಷಗಳಿಂದ ಬರುವವರಿಗೆ ಮಣೆಹಾಕಲು ಬಿಜೆಪಿ ಮುಂದಾಗಿದೆ.

ಎರಡನೇ ಪಟ್ಟಿಯಲ್ಲಿ ಪ್ರಮುಖವಾಗಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಮೈಸೂರಿನ ವರುಣಾದಿಂದ ಕಣಕ್ಕಿಳಿಯಲಿದ್ದಾರೆ. ಮಾಜಿ ಸಚಿವ ಜನಾರ್ಧನರೆಡ್ಡಿ ಅವರ ಸಹೋದರರಾದ ಕರುಣಾಕರರೆಡ್ಡಿ ಹರಪನಹಳ್ಳಿ, ಸೋಮಶೇಖರರೆಡ್ಡಿ ಬಳ್ಳಾರಿನಗರ, ಶಿವಾಜಿನಗರದಿಂದ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯನಾಯ್ಡು, ಮಾಲೂರಿನಿಂದ ಕೃಷ್ಣಯ್ಯ ಶೆಟ್ಟಿ, ಸೊರಬಾದಿಂದ ಕುಮಾರ್‍ಬಂಗಾರಪ್ಪ, ಮಳವಳ್ಳಿಯಿಂದ ಮಾಜಿ ಸಚಿವ ಸೋಮಶೇಖರ್, ಸರ್ವಜ್ಞನಗರದಿಂದ ನಿವೃತ್ತ ಪೊಲೀಸ್ ಅಧಿಕಾರಿ ಎಂ.ಎನ್.ರೆಡ್ಡಿ, ಗಾಂಧಿನಗರದಿಂದ ಬಿಬಿಎಂಪಿ ಮಾಜಿ ಸದಸ್ಯ ಎಲ್.ಶಿವಕುಮಾರ್ ಕಣಕ್ಕಿಳಿಯಲಿದ್ದಾರೆ.  ಚುನಾವಣೆಗೂ ಮುನ್ನವೇ ಟಿಕೆಟ್‍ನಿಂದಾಗಿ ಗಮನ ಸೆಳೆದಿದ್ದ ಶಿವಮೊಗ್ಗದ ಸಾಗರ, ಬೆಂಗಳೂರಿನ ಯಶವಂತಪುರ ಸೇರಿದಂತೆ ಮತ್ತಿತರ ಕ್ಷೇತ್ರಗಳಿಗೆ ಕೊನೆ ಹಂತದಲ್ಲಿ ಅಭ್ಯರ್ಥಿಯ ಹೆಸರುಗಳು ಘೋಷಣೆಯಾಗಲಿವೆ.

ಉಳಿದಂತೆ ಕರಾವಳಿ ಜಿಲ್ಲೆಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿರುವ ಕಾರಣ ಆರ್‍ಎಸ್‍ಎಸ್ ನಾಯಕರ ಸಲಹೆ ಪಡೆದು ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಿದ್ದಾರೆ. ಇಂದು ಬಿಡುಗಡೆಯಾಗಲಿರುವ ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ.
ಶಾಂತಿನಗರ- ವಾಸುದೇವಮೂರ್ತಿ
ಗಾಂಧಿನಗರ- ಎಲ್.ಶಿವಕುಮಾರ್
ಮಹಾಲಕ್ಷ್ಮಿ ಲೇಔಟ್- ಎಂ.ನಾಗರಾಜು
ಸರ್ವಜ್ಞನಗರ- ಎಂ.ಎನ್.ರೆಡ್ಡಿ
ಬ್ಯಾಟರಾಯನಪುರ- ರವಿ/ ರಾಜ್‍ಗೋಪಾಲ್
ವಿಜಯನಗರ- ಅಶ್ವತ್ಥನಾರಾಯಣ
ನೆಲಮಂಗಲ- ನಾಗರಾಜು
ದೊಡ್ಡಬಳ್ಳಾಪುರ- ಜೆ.ನರಸಿಂಹಸ್ವಾಮಿ
ಸೊರಬ- ಕುಮಾರ್‍ಬಂಗಾರಪ್ಪ
ಹೊನ್ನಾಳಿ- ಎಂ.ಪಿ.ರೇಣುಕಾಚಾರ್ಯ
ತೀರ್ಥಹಳ್ಳಿ- ಆರಗ ಜ್ಞಾನೇಂದ್ರ
ತರೀಕೆರೆ- ಸುರೇಶ್
ಹರಿಹರ- ದೇವೇಂದ್ರಪ್ಪ
ಮಾಯಕೊಂಡ- ಬಸವರಾಜನಾಯಕ್
ದಾವಣಗೆರೆ ಉತ್ತರ- ಅರವಿಂದ್ ಜಾದವ್
ಹರಪನಹಳ್ಳಿ- ಕರುಣಾಕರರೆಡ್ಡಿ
ಜಗಳೂರು- ರಾಮಚಂದ್ರ
ಚನ್ನಗಿರಿ- ಮಾಡಾಳು ವೀರೂಪಾಕ್ಷಪ್ಪ
ಮಳವಳ್ಳಿ- ಬಿ.ಸೋಮಶೇಖರ್
ಮದ್ದೂರು- ಶಿವಣ್ಣ
ಚಾಮರಾಜನಗರ- ಪ್ರೊ.ಮಲ್ಲಿಕಾರ್ಜುನಪ್ಪ
ಕೊಳ್ಳೇಗಾಲ- ನಂಜುಂಡಸ್ವಾಮಿ
ಹನೂರು- ಪ್ರೀತಮ್‍ಗೌಡ
ಗುಂಡ್ಲುಪೇಟೆ- ನಿರಂಜನ್‍ಕುಮಾರ್
ಬಳ್ಳಾರಿನಗರ- ಸೋಮಶೇಖರರೆಡ್ಡಿ
ಕನಕಗಿರಿ- ಹೇಮಾವತಿ
ಯಲಬುರ್ಗ- ಹಾಲಪ್ಪ ಆಚಾರ್
ಗಂಗಾವತಿ- ವೀರಣ್ಣ
ಮಾಗಡಿ- ರಂಗದಾಮಯ್ಯ
ರಾಮನಗರ- ತೇಜಸ್ವಿನಿ ರಮೇಶ್‍ಗೌಡ/ಪ್ರವೀಣ್‍ಗೌಡ
ಮುಳಬಾಗಿಲು- ಅಂಬರೀಶ್
ಮಾಲೂರು- ಕೃಷ್ಣಯ್ಯಶೆಟ್ಟಿ
ಉಡುಪಿ- ರಘುಪತಿಭಟ್
ಕಾಫು- ಲಾಲ್‍ಜಿಮೆಂಡನ್
ಗೌರಿಬಿದನೂರು- ಜಯಪಾಲ್‍ರೆಡ್ಡಿ
ಬಾಗೇಪಲ್ಲಿ-ಸಂಪಗಿ/ಕೃಷ್ಣಾರೆಡ್ಡಿ
ದೇವನಹಳ್ಳಿ- ನಾಗೇಶ
ಶಿರಾ- ಡಿ.ಪಿ.ಗೌಡ
ಚಿಕ್ಕನಾಯಕನಹಳ್ಳಿ- ಜೆ.ಮಾಧುಸ್ವಾಮಿ
ಮಧುಗಿರಿ- ರಮೇಶ್‍ರೆಡ್ಡಿ
ಕಡೂರು- ಬೆಳ್ಳಿಪ್ರಕಾಶ್/ಡಾ.ವಿಶ್ವನಾಥ್
ಬೀದರ್ ಉತ್ತರ- ಸೂರ್ಯವಂಶಿನಾಗಮಾರಪಲ್ಲಿ
ಗದಗ- ಅನಿಲ್‍ಮೆಣಸಿನಕಾಯಿ
ನರಗುಂದ- ಸಿ.ಸಿ.ಪಾಟೀಲ್
ರೋಣ- ಶಂಕರ್‍ಪಾಟೀಲ್ ಮುನೇನಕೊಪ್ಪ
ಶಿರಹಟ್ಟಿ- ರಾಮಪ್ಪಲಮಾಣಿ

Facebook Comments

Sri Raghav

Admin