ಬಿಬಿಎಂಪಿಯಲ್ಲೀಗ ಕುರ್ಚಿ ಕಿರಿಕಿರಿ : 286 ಮಂದಿಗೆ ಇರೋದು 274 ಕುರ್ಚಿಗಳು

ಈ ಸುದ್ದಿಯನ್ನು ಶೇರ್ ಮಾಡಿ

BMMP-off

ಬೆಂಗಳೂರು, ಆ.31- ಇರೋದು 274 ಸೀಟು, ಬರೋರು 286, ಉಳಿದ ಹನ್ನೆರಡು ಜನ ಕೂರೋದೆಲ್ಲಿ…? ಇದು ಬಿಬಿಎಂಪಿ ಕೌನ್ಸಿಲ್ ಕಾರ್ಯದರ್ಶಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಬರುವ ಸೆಪ್ಟೆಂಬರ್ 19 ರಂದು ಮೇಯರ್ ಚುನಾವಣೆ ನಡೆಯಲಿರುವ ಪಾಲಿಕೆ ಕೌನ್ಸಿಲ್ ಸಭೆಯ ಚಿತ್ರಣ ಇದು. 198 ಪಾಲಿಕೆ ಸದಸ್ಯರು, ಹೊಸದಾಗ ಸೇರ್ಪಡೆಯಾಗಿರುವ ರಾಜ್ಯಸಭಾ ಸದಸ್ಯರು, ಶಾಸಕರು,   ವಿಧಾನಪರಿಷತ್ ಸದಸ್ಯರು ಸೇರಿ ಒಟ್ಟು 266 ಸಂಖ್ಯೆಯಾಗುತ್ತದೆ. ಇದರ ಜತೆಗೆ 20 ಮಂದಿ ನಾಮನಿರ್ದೇಶಿತ ಸದಸ್ಯರು ಸೇರಿ 286 ಮಂದಿ ಆಗುತ್ತಾರೆ. ಆದರೆ ಸಭೆಯಲ್ಲಿರುವುದು 274 ಸೀಟುಗಳು. ಮೊದಲು ಬಂದವರು ಸೀಟ್ನಲ್ಲಿ ಆಸೀನರಾದರೆ ಶಾಸಕರು, ರಾಜ್ಯಸಭಾ ಸದಸ್ಯರು ಬಂದಾಗ ಎಲ್ಲಿ ಕೂರಿಸುವುದು ಎಂಬುದು ಕಗ್ಗಂಟಾಗಿದೆ.

ಇಂತಹ ಸನ್ನಿವೇಶ ಉಂಟಾಗಲು ಕಾಂಗ್ರೆಸ್ನವರೇ ಕಾರಣ. ಹೇಗಾದರೂ ಮಾಡಿ ವಯರ್ ಸ್ಥಾನ ತಾವೇ ಅಲಂಕರಿಸಬೇಕೆಂದು ಹಲವಾರು ಶಾಸಕರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುತ್ತಿರುವುದು ಇಷ್ಟೆಲ್ಲ ಅವಾಂತರಗಳಿಗೆ ಕಾರಣ ಎನ್ನುತ್ತಾರೆ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ.  ಈ ಬಾರಿಯೂ ಅಧಿಕಾರದ ಗದ್ದುಗೆ ಹಿಡಿಯಬೇಕೆಂಬ ತರಾತುರಿಯಲ್ಲಿರುವ ಕಾಂಗ್ರೆಸ್ನವರು ಹೊಸದಾಗಿ 5 ಮಂದಿ ಅಂದರೆ ಅಲ್ಲಂವೀರಭದ್ರಪ್ಪ, ಆಸ್ಕರ್ ಫರ್ನಾಂಡೀಸ್, ಡಾ.ಜಿ.ಪರಮೇಶ್ವರ್, ಬೋಸ್ರಾಜ್ ಮತ್ತು ಮಲ್ಕಾಪುರೆ ಹೆಸರನ್ನು ಸೇರ್ಪಡೆ ಮಾಡಿದ್ದಾರೆ. ಹಾಗಾಗಿ ಪಾಲಿಕೆ ಸದಸ್ಯರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

ಕಾಂಗ್ರೆಸ್ನವರು ಕಾನೂನು ವಿರೋಧವಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸುತ್ತಾ ಬಂದರೆ ಪಾಲಿಕೆ ಸದಸ್ಯರಿಗಿಂತ ಹೊರಗಿನವರೇ ಹೆಚ್ಚಾಗಲಿದ್ದಾರೆ ಎಂದು ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin