ಬಿಬಿಎಂಪಿ ಅಧಿಕಾರಿಗಳಿಗೆ ಬಾಡಿಗೆ ಕಾರು ಬೇಡವಂತೆ, ಬದಲಿಗೆ ಹಣ ಬೇಕಂತೆ

ಈ ಸುದ್ದಿಯನ್ನು ಶೇರ್ ಮಾಡಿ

bbmp

ಬೆಂಗಳೂರು,ಡಿ.14-ಬಿಬಿಎಂಪಿ ಅಧಿಕಾರಿಗಳಿಗೆ ಬಾಡಿಗೆ ಕಾರು ಬೇಡವಂತೆ… ಅವರಿಗೆ ಕಾರಿನ ಬದಲು ಹಣವೇ ಬೇಕಂತೆ… ಇದಕ್ಕಾಗಿ ಸೂಕ್ತ ನಿರ್ಣಯವನ್ನು ಮಾಡಿ ಆದೇಶ ಹೊರಡಿಸಲು ಸಿದ್ದತೆ ನಡೆದಿದೆ. ಬಿಬಿಎಂಪಿ ಸ್ವಂತ ಮಾಲೀಕತ್ವದ 140 ಕಾರುಗಳಿಗೆ ಜೊತೆಗೆ 380 ಕಾರುಗಳನ್ನು ಬಾಡಿಗೆ ಪಡೆಯಲಾಗಿದೆ. ಈ ಬಾಡಿಗೆ ಕಾರುಗಳ ಕರಾರು ಅವಧಿ ಮುಗಿದು ನಾಲ್ಕು ತಿಂಗಳು ಕಳೆದಿದೆ. ಹೀಗಾಗಿ ಮುಂದಿನ ಅವಧಿಗೆ ಕಾರುಗಳನ್ನು ಬಾಡಿಗೆ ಪಡೆಯಲು ಬಿಬಿಎಂಪಿ ಟೆಂಡರ್ ಕರೆಯಬೇಕಿತ್ತು. ಆದರೆ ಪಾಲಿಕೆ ಅಧಿಕಾರಿಗಳು ಈಗ 190 ಕಾರುಗಳನ್ನು ಮಾತ್ರ ಬಾಡಿಗೆ ಪಡೆಯಲು ಟೆಂಡರ್ ಕರೆದಿದ್ದಾರೆ.

ಉಳಿದ 160 ಕಾರುಗಳನ್ನು ಬಾಡಿಗೆ ಪಡೆಯುವ ಬದಲು ಅದಕ್ಕೆ ತಗಲುವ ವೆಚ್ಚವನ್ನು ಅಧಿಕಾರಿಗಳೇ ನೀಡಲು ನಿರ್ಧರಿಸಲಾಗಿದೆ. ಅಂದರೆ ಒಬ್ಬ ಅಧಿಕಾರಿಗೆ ಕಾರಿಗೆ ಬದಲು ಒಂದು ತಿಂಗಳಿಗೆ 15ರಿಂದ 20 ಸಾವಿರ ಹಣ ನೀಡಲು ತೀರ್ಮಾನಿಸಲಾಗಿದೆ.  ಆದರೆ ಕೆಎಂಸಿ ಕಾಯ್ದೆಯಲ್ಲಿ ಕಾರು ಸೌಲಭ್ಯದ ಬದಲು ಹಣ ನೀಡುವುದಕ್ಕೆ ಅವಕಾಶವಿಲ್ಲ. ಇದನ್ನು ಯಾವುದೇ ನಿಯಮ ಒಪ್ಪುವುದಿಲ್ಲ. ಅಷ್ಟೇಕೆ ಈ ವಿಚಾರವನ್ನು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ಪಡೆದಿಲ್ಲ. ಸರ್ಕಾರದ ಅನುಮತಿಯನ್ನೂ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಅನುದಾನ ಮತ್ತು ತೆರಿಗೆದಾರರ ಹಣವನ್ನು ಅಧಿಕಾರಿಗಳು ಇಚ್ಚಿಸಿದಂತೆ ಹಂಚಿಕೆ ಮಾಡಲು ಬಿಬಿಎಂಪಿಗೆ ಯಾವುದೇ ಅಧಿಕಾರ ಇರುವುದಿಲ್ಲ.

Facebook Comments

Sri Raghav

Admin