ಬಿಬಿಎಂಪಿ ಜೊತೆ ಪೊಲೀಸ್ ಕಮಿಷನರೇಟ್’ನ್ನೂ ವಿಭಜಿಸಲು ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Bengalaluru-city-police
ಬೆಂಗಳೂರು, ಅ.26- ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜನೆಗೆ ಮುಂದಾಗಿ ರುವ ರಾಜ್ಯ ಸರ್ಕಾರ, ನಗರ ಪೊಲೀಸ್ ಕಮೀಷನರೇಟ್‍ನ್ನೂ ವಿಭಜಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.ನಗರದ ವ್ಯಾಪ್ತಿ ಮತ್ತಷ್ಟು ಹೆಚ್ಚಾಗಿರು ವುದರ ಜತೆಗೆ ಜನಸಂಖ್ಯೆ ಪ್ರಮಾಣ ಸಹ ಅಧಿಕವಾ ಗುತ್ತಿದೆ. ಇದರಿಂದಾಗಿ ಅಪರಾಧ ಪ್ರಮಾಣ ಗಳು ಹೆಚ್ಚಳವಾಗಿದ್ದು, ಕಾನೂನು ಸುವ್ಯವಸ್ಥೆ ಸವಾಲಾಗಿ ಪರಿಣಮಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಪೊಲೀಸ್ ಕಮೀಷನರೇಟ್ ವಿಭಜನೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ. ಒಬ್ಬರೇ ಪೊಲೀಸ್ ಆಯುಕ್ತರಿಂದ ನಗರದ ಸುಮಾರು ಒಂದು ಕೋಟಿ ಜನರಿಗೆ ರಕ್ಷಣೆ ಒದಗಿಸೋದಕ್ಕೆ ಸಾಧ್ಯ ವಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಪೂರ್ವ ಹಾಗೂ ಪಶ್ಚಿಮ ಇಲ್ಲವೇ ನಗರವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಕಾನೂನು ಸುವ್ಯವಸ್ಥೆಯ 104 ಹಾಗೂ ಸಂಚಾರ ವಲಯದ 44 ಸೇರಿದಂತೆ ಹೊರವಲಯದ ಕೆಲವು ಪೊಲೀಸ್ ಠಾಣೆಗಳನ್ನು ನಗರ ವ್ಯಾಪ್ತಿಗೆ ಸೇರಿಕೊಂಡು ವಿಭಜನೆ ಮಾಡಲು ಉದ್ದೇಶಿಸಿದೆ.

ರಾಜ್ಯ ಗೃಹ ಇಲಾಖೆ ಕೂಡ ಬೆಂಗಳೂರು ಪೊಲೀಸ್ ಕಮೀಷನರೇಟ್ ವಿಭಜನೆ ಮಾಡಲಿ ರುವ ಪ್ರಸ್ತಾವನೆ ಸಿದ್ಧಪಡಿಸಿಕೊಂಡು ನೆರೆಯ ಮಹಾರಾಷ್ಟ್ರದ ಮುಂಬೈಯಲ್ಲಿ ಮೂವರು ಪೊಲೀಸ್ ಆಯುಕ್ತರಿರುವುದನ್ನು ಪ್ರಸ್ತಾಪಿಸಿ ಅದರ ಸಾಧಕ ಬಾಧಕಗಳ ಪರಾಮರ್ಶೆ ನಡೆಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರೊಂದಿಗೆ ಕಮೀಷನರೇಟ್ ವಿಭಜನೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕಾವೇರಿ ಗಲಾಟೆ, ಉಕ್ಕಿನ ಸೇತುವೆ ಇನ್ನಿತರ ವಿಚಾರಗಳಿಂದಾಗಿ ಕಮೀಷನ ರೇಟ್ ವಿಭಜನೆ ಪ್ರಕ್ರಿಯೆ ತಡವಾಗಿದ್ದು, ಬಿಬಿಎಂಪಿ ವಿಭಜನೆ ಜೊತೆಗೆ ಕಮೀಷನರೇಟ್ ವಿಭಜನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಕಮೀಷನರೇಟ್ ವಿಭಜನೆಗೊಂಡರೆ ಠಾಣೆಗಳ ವ್ಯಾಪ್ತಿಯು ಪುನರ್ ವಿಂಗಡಣೆಯಾಗಲಿದ್ದು, ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟಂತೆ ಡಿಸಿಪಿ ವಿಭಾಗಗಳು ಮಾರ್ಪಾಟುಗೊಳ್ಳಲಿವೆ. ಶಿಸ್ತಿನ ಇಲಾಖೆಯ ಕಮೀಷನರೇಟ್ ವಿಭಜನೆ ಯನ್ನು ಕೆಲವು ಅಧಿಕಾರಿಗಳು ಸ್ವಾಗತಿಸಿದ್ದರೆ ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಒಬ್ಬರೇ ಕಮೀಷನರ್ ನಗರದ ವಿವಿಧೆಡೆ ಸಂಚರಿಸಿ ಕಾನೂನು ಸುವ್ಯವಸ್ಥೆ, ಅಪರಾಧ ತಡೆಗಟ್ಟುವುದನ್ನು ಅರಿಯುವುದು ನಗರದ ವ್ಯಾಪ್ತಿ ಹೆಚ್ಚಳದಿಂದ ಸಾಧ್ಯವಾಗದು. ಅದರಿಂದಾಗಿ ವಿಭಜನೆ ಒಳ್ಳೆಯದು ಎಂದು ಕೆಲ ಅಧಿಕಾರಿಗಳು ಹೇಳಿದ್ದಾರೆ. ಮತ್ತೆ ಕೆಲ ಅಧಿಕಾರಿಗಳು ಅಗತ್ಯವೆನಿ ಸಿದರೆ ಡಿಸಿಪಿ ವಿಭಾಗಗಳು ಹೆಚ್ಚಿಸಲಿ. ಆದರೆ ಭದ್ರತೆಯ ದೃಷ್ಟಿಯಿಂದ ಒಬ್ಬರೇ ಪೊಲೀಸ್ ಕಮೀಷನರ್ ಸೂಕ್ತ ಎಂದು ವಿಭಜನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin