ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

BBMP
ಬೆಂಗಳೂರು, ಅ.19-ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ನಾಳೆ ಚುನಾವಣೆ ನಡೆಯಲಿದ್ದು ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ.ಹನ್ನೆರಡು ಸ್ಥಾಯಿ ಸಮಿತಿಗಳಿಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗೂ ಪಕ್ಷೇತರರು ಇಂದು ನಾಮ ಪತ್ರ ಸಲ್ಲಿಸಿದರು. ಕಾಂಗ್ರೆಸ್-4, ಜೆಡಿಎಸ್-4, ಪಕ್ಷೇತರರಿಗೆ-4 ಅಧ್ಯಕ್ಷ ಸ್ಥಾನವನ್ನು ನಿಗದಿಗೊಳಿಸಲಾಗಿದೆ. ಪ್ರತಿ ಸ್ಥಾಯಿ ಸಮಿತಿಗಳಲ್ಲೂ 11 ಸದಸ್ಯರಿರುತ್ತಾರೆ.  ಕಾಂಗ್ರೆಸ್-5, ಬಿಜೆಪಿ-4, ಪಕ್ಷೇತರರು, ಜೆಡಿಎಸ್‍ಗೆ 2 ಸದಸ್ಯ ಸ್ಥಾನ ನೀಡಲಾಗುತ್ತದೆ. ನಾಳೆ ನಡೆಯಲಿರುವ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತೆ ಜಯಂತಿ ಅವರು 12 ಸ್ಥಾಯಿಸಮಿತಿಗೆ ತಲಾ 11 ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡುತ್ತಾರೆ.

ನಂತರ ಮೇಯರ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಜೆಡಿಎಸ್ ಆಯ್ಕೆ ಸಲೀಸು: ನಾಮಪತ್ರ ಸಲ್ಲಿಕೆಗೂ ಮೊದಲು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ನೇತೃತ್ವದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಆ ಪಕ್ಷದ ನಾಲ್ಕು ಸದಸ್ಯರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.ಲಗ್ಗೆರೆ ವಾರ್ಡ್‍ನ ಮಂಜುಳಾ ನಾರಾಯಣಸ್ವಾಮಿ ನಗರಯೋಜನೆ, ನಾಗಪುರ ವಾರ್ಡ್‍ನ ಭದ್ರೇಗೌಡಗೆ ವಾರ್ಡ್‍ಮಟ್ಟದ ಸಾರ್ವಜನಿಕ ಕಾಮಗಾರಿ, ನೇತ್ರ ನಾರಾಯಣ್‍ಗೆ ಲೆಕ್ಕಪತ್ರ, ಸ್ಥಾಯಿ ಸಮಿತಿ, ನಝೀಮಖಾನ್‍ಗೆ ಶಿಕ್ಷಣ ಸ್ಥಾಯಿ ಸಮಿತಿಗೆ ಅಧ್ಯಕ್ಷ ಸ್ಥಾನವನ್ನು ಅಂತಿಮಗೊಳಿಸಲಾಗಿದೆ.

ಕಾಂಗ್ರೆಸ್‍ನಲ್ಲಿ ಕಗ್ಗಂಟು:

ಕಾಂಗ್ರೆಸ್‍ನಲ್ಲಿ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿದ್ದು ಇಂದು ಕೆಪಿಸಿಸಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು. ಪೈಪೋಟಿ ಹೆಚ್ಚಾದ ಹಿನ್ನೆಲೆಯಲ್ಲಿ ಅಧ್ಯಕ್ಷರ ಆಯ್ಕೆ ವಿಚಾರವನ್ನು ಹೈಕಮಾಂಡ್‍ಗೆ ಬಿಡಲಾಗಿದೆ. ಹಾಗಾಗಿ ಆ ಪಕ್ಷದವರು ನಾಮಪತ್ರ ಸಲ್ಲಿಸಿದರು.ಇದೇ ವೇಳೆ ಪಕ್ಷೇತರರು ಕೂಡ ನಾಮಪತ್ರ ಸಲ್ಲಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin