ಬಿರುಕು ಬಿಟ್ಟ ಶಾಲಾ ಕೊಠಡಿಗಳು ಮಕ್ಕಳ ಗೋಳು ಕೇಳೋರ್ಯಾರು?

ಈ ಸುದ್ದಿಯನ್ನು ಶೇರ್ ಮಾಡಿ

childrens--school
ಶ್ರೀನಿವಾಸಪುರ, ಆ.27- ಕಳಪೆ ಕಾಮಗಾರಿಯಿಂದ ಶಾಲಾ ಕಟ್ಟಡ ಕುಸಿಯುವ ಹಂತದಲ್ಲಿದ್ದು, ಶಾಲಾ ಮಕ್ಕಳು ಪ್ರಾಣ ಲೆಕ್ಕಿಸದೆ ವಿದ್ಯಾಬ್ಯಾಸ ಪಡೆಯುತ್ತಿರವ ಮಕ್ಕಳ ಗೋಳು ಕೇಳೋರ್ಯಾರು..?ನಗರದ ಹೊರವಲಯದ ಕೊಳಚೆ ಪ್ರದೇಶವಾಗಿರುವ ಇಂದಿರಾ ನಗರವು ಸುಮಾರು 400 ಜನಸಂಖ್ಯೆಯನ್ನು ಹೊಂದಿದ್ದು, ಇಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬದವರೇ ವಾಸವಾಗಿದ್ದಾರೆ. ಪ್ರತಿ ನಿತ್ಯ ಇಲ್ಲಿನ ಜನರು ತಮ್ಮ ಹೊಟ್ಟೆಪಾಡಿಗಾಗಿ ಗಾರೆ ಕೆಲಸ, ಮಾಡುತ್ತಿದ್ದು, ಮುಂಜಾನೆಯೇ ಅಕ್ಕ ಪಕ್ಕದ ಗ್ರಾಮಗಳಿಗೆ ಕೂಲಿಗಾಗಿ ಹೊರಡುತ್ತಾರೆ. ಇನ್ನು ವಾಪಸ್ ಬರುವುದು ಸಂಜೆಯೇ. ಹಾಗಾಗಿ ಇವರ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಓದುತ್ತಿದ್ದಾರೆ.
ಕಳೆದ 2003 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶಾಲೆಯನ್ನು ಪ್ರಾರಂಭಿಸಲು ಸರ್ಕಾರದಿಂದ 1,50,000 ರೂಪಾಯಿಗಳು ಮಂಜೂರಾಗಿದ್ದು ಅದೇ ರೀತಿಯಲ್ಲಿ ನೂತನ ಶಾಲೆಯಾಗಿ ಉರ್ದು ಶಾಲೆಯನ್ನು ನಿರ್ಮಿಸಲಾಗಿದೆ. ಆದರೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಶಾಲೆಯ ಮೇಲ್ಛಾವಣಿಯನ್ನು ಆರ್‍ಸಿಸಿ ಇಲ್ಲದೆ ಕಲ್ಲು ಚಪ್ಪಡಿಗಳನ್ನು ಬಳಸಿ ಪಿಲ್ಲರ್ ನಿರ್ಮಿಸದೇ ಶಾಲೆ ನಿರ್ಮಿಸಲಾಗಿದೆ ಎನ್ನಲಾಗಿದೆ. ಸರ್ಕಾದ ತೆರಿಗೆ ಹಣವನ್ನು ಸರ್ಕಾರ ಶಿಕ್ಷಣ ಇಲಾಖೆಗೆ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಟ್ಟು ಶಾಲೆಯ ಕಟ್ಟಡಗಳು, ಶೌಚಾಲಯಗಳು ನೀರಿನ ವ್ಯವಸ್ಥೆ ಶಾಲಾ ಕಾಂಪೌಂಡ್ ನಿರ್ಮಿಸಲಾಗುತ್ತಿದೆ.

ಶಾಲೆಯಲ್ಲಿ ಸುಮಾರು 35 ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದು, ಪ್ರತಿ ನಿತ್ಯ ಶಾಲೆಗೆ ಬರುವ ಮಕ್ಕಳು ತಮ್ಮ ಪ್ರಾಣವನ್ನು ಲೆಕ್ಕಿಸದೇ ಶಾಲೆಗೆ ಹಾಜರಾಗಿ ಶಿಕ್ಷಣ ಪಡೆಯಬೇಕಾಗಿದೆ. ಕಾರಣ ಇಲ್ಲಿನ ಶಾಲೆಯ ಗೋಡೆಗಳು ಪಾಯ ಹಂತದಿಂದ ಬಿರುಕು ಬಿಟ್ಟಿದೆ. ನೆಲಹಾಸು (ಫ್ಲೋರಿಂಗ್) ದೊಡ್ಡ ಬಿರುಕು ಬಿಚ್ಚಿದೆ. ಹೀಗಿದ್ದರೂ ಸಹ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಮಕ್ಕಳ ಬಗ್ಗೆ ಶಾಲೆಯ ಶಿಕ್ಷಕರಿಗೆ ಕಿಂಚಿತ್ತು ಕಾಳಜಿ ಇಲ್ಲದೇ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. ಯಾಕೆಂದರೆ ಮಳೆಗಾಲದಲ್ಲಿ ಶಾಲೆಯು ಸೋರುವುದು ಸಾಮಾನ್ಯ. ಏನಾದರೂ ಶಾಲಾ ಕಟ್ಟಡ ಕುಸಿದರೆ ಇಲ್ಲಿನ ವiಕ್ಕಳ ಗತಿ ಏನು? ಆದರೆ ಇದೇ ಶಾಲೆಯಲ್ಲಿ ಕರ್ತವ್ಯ ಮಾಡುತ್ತಿರುವ ಮೂವರು ಶಿಕ್ಷಕರು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎನ್ನಲಾಗಿದೆ.

ಕಳೆದ 13 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಶಾಲಾ ಕಟ್ಟಡವು ಅತಿ ಕಳಪೆ ಮಟ್ಟದ ಕಾಮಗಾರಿಯಾಗಿರುವುದು ಕಾಣಬಹುದು. ಇದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೊಕ್ಕಸಕ್ಕೆ ನಷ್ಟವಾಗಿದೆ ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಒಲವು ತೋರಿಸಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಬಡ ಪೋಷಕರು ಹರಸಾಹಸ ಪಡುವಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳನ್ನು ಶಾಲೆಗೆ ಬರುವಂತೆ ಬಿಸಿಯೂಟ, ಕ್ಷೀರ ಭಾಗ್ಯದಿಂದ ಹಾಲು ನೀಡುವುದು, ಸಮವಸ್ತ್ರ, ಶೂ ಹಾಗೂ ಸೈಕಲ್ ವಿತರಣೆ ಮಾಡುತ್ತಾ ಇರುವುದು ಸಂತಸದ ವಿಷಯ. ಆದರೆ ಇಲ್ಲಿನ ಶಾಲೆಯ ಕುರಿತು ಯಾರೂ ಸಹಾ ಗಮನ ಹರಿಸದೇ ಇದ್ದಾರೆ. ಈ ಬಡ ಮಕ್ಕಳ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಗಮನ ಹರಿಸುವುದೇ ಕಾದು ನೋಡಬೇಕಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin