ಬಿಸಿಯೂಟದ ಅಕ್ಕಿ ಕದ್ದು ಸಿಕ್ಕಿಬಿದ್ದ ಮುಖ್ಯ ಶಿಕ್ಷಕಿ

ಈ ಸುದ್ದಿಯನ್ನು ಶೇರ್ ಮಾಡಿ

Head-Master--01

ಮಳವಳ್ಳಿ, ಮೇ 30- ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕಾಗಿ ನೀಡಿದ್ದ ಅಕ್ಕಿಯನ್ನು ಕದ್ದು ಮನೆಗೆ ಸಾಗಿಸುತ್ತಿದ್ದ ಮುಖ್ಯ ಶಿಕ್ಷಕಿಯನ್ನು ಗ್ರಾಮಸ್ಥರೇ ಹಿಡಿದು ಶಾಲೆಯಲ್ಲಿ ಘೇರಾವ್ ಮಾಡಿದ ಘಟನೆ ತಾಲೂಕಿನ ವಡ್ಡರಹಳ್ಳಿಯಲ್ಲಿ ನಡೆದಿದೆ. ಕಳೆದ 23 ವರ್ಷಗಳಿಂದ ಒಂದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿ ಶಾರದಮ್ಮ ಬಿಸಿಯೂಟ ಅಕ್ಕಿ ಕದ್ದು ಸಿಕ್ಕಿ ಬಿದ್ದಿದ್ದಾರೆ.  ಮುಖ್ಯ ಶಿಕ್ಷಕಿ ಶಾರದಮ್ಮ ಈ ಹಿಂದೆ ಶಾಲೆಗೆ ಪ್ರತಿ ನಿತ್ಯ 11 ಗಂಟೆಗೆ ಬರುತ್ತಿದ್ದರು.ಇಂದು ಬೆಳಿಗ್ಗೆ 9ಗಂಟೆಗೆ ಸಂಬಂಧಿ ಹುಡುಗನ ಸ್ಕೂಟರ್‍ನಲ್ಲಿ ಬಂದು ಶಾಲೆಯಲ್ಲಿದ್ದ 50 ಕೆಜಿ ಅಕ್ಕಿ ಚೀಲವನ್ನು ಸ್ಕೂಟರ್‍ನಲ್ಲಿ ಹಾಕಿಕೊಂಡು ಹೊರಟಿದ್ದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಮುಖ್ಯ ಶಿಕ್ಷಕಿಯ ಬಳಿ ತೆರಳಿ ಪ್ರಶ್ನಿಸಿದರು. ಅನಮಾನ ಬಂದು ಗ್ರಾಮಸ್ಥರು ಹಾಗೂ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳನ್ನು ಕರೆಸಿ ವಿಚಾರಣೆ ಮಾಡಿದಾಗ ಮುಖ್ಯ ಶಿಕ್ಷಕಿಯೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಗ್ರಾಮಸ್ಥರು ಪೊಲೀಸರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರವಾಣಿ ಮೂಲಕ ಸುದ್ದಿ ಮುಟ್ಟಿಸಿ ನಂತರ ಮುಖ್ಯಶಿಕ್ಷಕಿಯನ್ನು ಶಾಲೆ ಕೊಠಡಿಯಲ್ಲಿ ಘೇರಾವ್ ಮಾಡಿದ್ದರು.

ಸ್ಥಳಕ್ಕೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ಭೀಮನಾಯ್ಕ ಬಿಸಿಯೂಟದ ಸಹಾಯಕ ನಿರ್ದೇಶಕ ಮಹದೇವು ಹಾಗೂ ಪೊಲೀಸರು ಭೇಟಿ ನೀಡಿ ಮುಖ್ಯ ಶಿಕ್ಷಕಿ ಶಾರದಮ್ಮರನ್ನು ವಿಚಾರಣೆಗೆ ಒಳಪಡಿಸಿದಾಗ ನಾನು ಅಕ್ಕಿ ತೆಗೆದುಕೊಂಡು ಹೋಗಿರುವುದು ನಿಜ. ಅಕ್ಕಿಯಲ್ಲಿ ಬೀಡಿ ಸಿಗರೇಟ್ ಇತ್ತು, ಇದನ್ನು ಶುದ್ಧವಾಗಿಲ್ಲ ಎಂಬುದನ್ನು ಅಧಿಕಾರಿಗಳಿಗೆ ತೋರಿಸಲು ಹೋಗಿದ್ದಷ್ಟೇ ಎಂದು ಹೇಳಿದ್ದಾರೆ.  ವಿಚಾರಣೆ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಸರಿಯಾದ ಉತ್ತರಗಳನ್ನು ನೀಡಿಲ್ಲ ಮತ್ತು ಸರಿಯಾದ ಮಾಹಿತಿ ನೀಡಿಲ್ಲದ ಕಾರಣ ಶಿಕ್ಷಕಿ ಅಮಾನತಿಗೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಬಿಇಒ ಭೀಮನಾಯಕ್ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin