ಬಿಸಿಯೂಟ ಸೇವನೆ : ಮಕ್ಕಳು ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

SRNIVASPURA6

ಶ್ರೀನಿವಾಸಪುರ, ಸೆ.17- ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿದ್ದ 25 ಶಾಲಾ ಮಕ್ಕಳು ಚೇತರಿಸಿಕೊಂಡಿರುವ ಘಟನೆ ತಾಲ್ಲೂಕಿನ ಚಲ್ದಿಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟಲ್ಲಿ ಸೇವಿಸಿದ ನಂತರ ಸುಮಾರು 3 ಗಂಟೆಯಲ್ಲಿ ಶಾಲಾ ಮಕ್ಕಳಲ್ಲಿ ಹೊಟ್ಟೆ ನೋವು, ವಾಂತಿ ಕಾಣಿಸಿ ಕೊಂಡಾಗ ಹೆಚ್ಚೆತ್ತ ಶಿಕ್ಷಕರು ಹಾಗೂ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದಾರೆ.ವಿಷಯ ತಿಳಿದ ಕೂಡಲೆ ತಾಲ್ಲೂಕು ದಂಡಾಧಿಕಾರಿಯಾದ ವೈ.ರವಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ಮಾತನಾಡಿ, ಇನ್ನು ಮುಂದೆ ಪ್ರತಿಯೊಂದು ಶಾಲೆಗಳಿಗೆ ಮಧ್ಯಾಹ್ನದ ಬಿಸಿ ಊಟದ ಸಮಯದಲ್ಲಿ ಭೇಟಿ ನೀಡಿ ಆಹಾರ ಸಿದ್ದಪಡಿಸಿರುವ ಕುರಿತು ಹಾಗೂ ಪದಾರ್ಥಗಳನ್ನು ಪರಿಶೀಲಿಸುತ್ತೇನೆ. ಲೋಪದೋಷಗಳು ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಕೆ.ರಾಘವೇಂದ್ರ ಭೇಟಿ ನೀಡಿ ಮಕ್ಕಳ ಆರೋಗ್ಯ ಕುರಿತು ವಿಚಾರಿಸಿ ನಂತರ ಶಾಲೆಗೆ ಭೇಟಿ ನೀಡಿ ಶಾಲಾ ಶಿಕ್ಷಕರಿಂದ ಮಾಹಿತಿ ಸಂಗ್ರಹಿಸಿ ತಯಾರಾದ ಬಿಸಿ ಊಟವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳುಹಿಸದಂತೆ ನಿಗಾ ವಹಿಸಲಾಗುವುದು. ಪ್ರಯೋಗಾಲಯದಿಂದ ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇನೆ ಎಂದರು.  ವೈದ್ಯರನ್ನು ವರದಿಗಾರರು ವಿಚಾರಿಸಿದಾಗ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಇಲ್ಲಾ, ಎಲ್ಲಾ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಮಕ್ಕಳಲ್ಲಿ ಚೇತರಿಕೆ ಕಾಣುತ್ತಿದೆ ಎಂದು ವೈದ್ಯರು ತಿಳಿಸಿದರು.ಈ ವೇಳೆ ಬಿಸಿ ಊಟ ಸಹಾಯಕ ನಿರ್ದೆಶಕರಾದ ಕನ್ನಯ್ಯ, ಸ.ನೌ.ಸಂಘದ ಅಧಕ್ಷ ನಾಗರಾಜ್, ಸಿಪಿಐ ವೆಂಕಟರಾಮಪ್ಪ, ಎಸ್‍ಐ ಪ್ರದೀಪ್ ಸಿಂಗ್ ಭೇಟಿ ನೀಡಿದ್ದರು. ತಾಲ್ಲೂಕು ಆರೋಗ್ಯ ಅದಿಕಾರಿ ಶ್ರೀನಿವಾಸ್, ಚಲ್ದಿಗಾನಹಳ್ಳಿ ಗಾಪಂ ಅಧ್ಯಕ್ಷರಾದ ಶಿಲ್ಪಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin