ಬಿಸಿಲಿನ ತಾಪ ಹೆಚ್ಚಾದಂತೆ ಜಗತ್ತು ಅಪಾಯ ಎದುರಿಸುವಲ್ಲಿ ಸಂದೇಹವಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

2

ಕಲಘಟಗಿ,ಮಾ.25- ಬಿಸಿಲಿನ ತಾಪ ಹೆಚ್ಚಾದಂತೆ, ಭೂಮಿಯು ಸಹ ದಿನೆ ದಿನೆ ಸುಡುತ್ತಿದೆ. ಇದೇ ರೀತಿ ತಾಪ ಹೆಚ್ಚಾದರೆ ಮುಂಬರುವ ದಿನಗಳಲ್ಲಿ ಜಗತ್ತು ಹಿಂದೆಂದು ಕಂಡರಿಯದಂತಹ ಅಪಾಯ ಎದುರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಗ್ರಾಪಂ ಸದಸ್ಯ ಮೌಲಾಸಾಬ ಪೇಂಡಾರಿ ಅಭಿಪ್ರಾಯ ಪಟ್ಟರು.
ತಾಲೂಕಿನ ಹಸರಂಬಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಅರಣ್ಯ ದಿನಾಚರಣೆಯಲ್ಲಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸಕ್ತ ಸಂದರ್ಭದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲು ಮೂಲಕಾರಣ ಅರಣ್ಯನಾಶ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರ ಕಡಿದು ಕಾಡನ್ನೇ ನಾಶ ಮಾಡಲು ಹೊರಟಿದ್ದಾನೆ ಎಂದು ತಿಳಿಸಿದರು.

ಸಕಾಲಕ್ಕೆ ಮಳೆಯಾಗದೆ, ಭೀಕರ ಬರಗಾಲವನ್ನು ತಾನೆ ತಂದುಕೊಂಡಿದ್ದಾನೆ. ಈ ಬರಗಾಲವು ಧರೆಗುರುಳಿ ಜೀವ ಬಿಟ್ಟ ಆ ಮರದ ಶಾಪದ ಸಂಕೇತವಾಗಿದೆ. ಈ ಶಾಪದಿಂದ ಮುಕ್ತಿ ಹೊಂದಬೇಕಾದರೆ ಮತ್ತು ವಾತಾವರಣದಲ್ಲಿ ಸಮತೊಲನ ಕಾಪಾಡಿಕೊಳ್ಳಬೇಕಾದರೆ ಹೆಚ್ಚು ಮರಗಳನ್ನು ಬೆಳೆಸುವ ಸಂಕಲ್ಪ ಮಾಡಲೇಬೇಕಾದ ಸಂದರ್ಭ ಬಂದೊದಗಿದೆ ಎಂದು ಅವರು ಹೇಳಿದರು.ಹಸರಂಬಿ ಎಚ್‍ಪಿಎಸ್ ಶಾಲೆಯ ಮುಖ್ಯಗುರು ಬಿ.ಜೆ. ಕಲ್ಲೂರ ಮಾತನಾಡಿ, ಸಸಿಗಳು ಮಕ್ಕಳ ಸಮಾನ ಅವುಗಳನ್ನು ನಾವು ಜಾಗೃತಿಯಿಂದ ಬೆಳೆಸಬೇಕು. ಬೆಳೆದ ಮೇಲೆ ಭೂಮಿಗೆ ಮತ್ತು ಜೀವ ಜಗತ್ತಿಗೆ ಕೆಡಕು ಬಯಸದ ಏಕೈಕ ಜೀವಿ ಎಂದರೆ ಅದುವೇ ಮರ. ಯಾವತ್ತು ಪರೋಪಕಾರಿಯಾಗಿಯೇ ಜೀವಿಸುವ ಮರವನ್ನು ನಾವು ಪ್ರೀತಿಯಿಂದ ನೋಡಿಕೊಂಡರೆ ಮಾತ್ರ ಈ ವಿಶ್ವ ಅರಣ್ಯ ದಿನ ಆಚರಣೆಗೆ ಒಂದು ಅರ್ಥ ಬರುತ್ತದೆ ಎಂದು ಅವರು ನುಡಿದರು.

ಹಸರಂಬಿ ಉಪವಲಯ ಅರಣ್ಯಾಧಿಕಾರಿ ಎಸ್.ಎಚ್. ತಡಕೋಡ ಮಾತನಾಡಿ, ಅರಣ್ಯ ನಾಶದಿಂದ ಇಂದು ಕಾಡಿನಲ್ಲಿರಬೇಕಾದ ಕೆಲ ಪ್ರಾಣಿಗಳು ನಾಡಿನತ್ತ ಬರುತ್ತಿವೆ. ಅರಣ್ಯವಾಸಿ ಪ್ರಾಣಿಗಳು ಈ ಕಾಡಿನ ಸಂಕೃತಿಯ ಪ್ರತೀಕ. ಅವುಗಳ ರಕ್ಷಣೆ ಪ್ರತಿಯೊಬ್ಬರ ಜವಾಬಾ„ರಿಯಾಗಿದೆ. ಅವುಗಳ ರಕ್ಷಣೆ ಮಾಡುವ ಉದ್ದೇಶದಿಂದ ಪ್ರತಿಯೊಬ್ಬರು ಒಂದು ಸಸಿಯನ್ನು ನೆಟ್ಟು ಅದರ ಪಾಲನೆ ಪೋಷಣೆಯನ್ನು ಮಾಡಿ ಬೆಳೆಸುವಂತ ಜವಾಬಾ„ರಿಯನ್ನು ತಾವೆ ವಹಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಮೌಲಾಸಾಬ ಪೆಂಡಾರಿ, ಹಸರಂಬಿ ಉಪವಲಯ ಅರಣ್ಯಾಧಿಕಾರಿ ಎಸ್.ಎಚ್. ತಡಕೊಡ, ಮುಖ್ಯಗುರು ಬಿ.ಜಿ. ಕಲ್ಲೂರ, ಶಿಕ್ಷಕರಾದ ಎನ್ ಚೇತನ, ಎಚ್.ಡಿ. ಸೋಮಶೇಖರ, ಜೆ.ಎಂ. ಯತೋರಗಲ್, ಅರಣ್ಯ ರಕ್ಷಕ ಶಿವಾನಂದ ಮಾದರ, ಕಾಶಿನಾಥ ಕಮ್ಮಾರ, ಮಂಜುನಾಥ ಉಣಕಲ್, ರಾಜು ಹಾಗೂ ವಿದ್ಯಾರ್ಥಿಗಳು ಇತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin