ಬಿಸಿಸಿಐಗೆ ತಾತ್ಕಲಿಕ ನೂತನ ಸಮಿತಿ ರಚನೆ, ವಿನೋದ್ ರಾಯ್ ಮುಖ್ಯಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

BCCI-01

ನವದೆಹಲಿ,ಜ.31- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ತಾತ್ಕಾಲಿಕವಾಗಿ ನೂತನ ಸಮಿತಿಯನ್ನು ರಚಿಸಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಬಿಸಿಸಿಐನಲ್ಲಿ ಆಡಳಿತ ನಡೆಸಲು ನಾಲ್ವರ ಸದಸ್ಯ ಸಮಿತಿ ರಚನೆಗೆ ಸಮ್ಮತಿಸಿದ್ದು , ಈ ಸಮಿತಿಯು ಬಿಸಿಸಿಐಗೆ ಚುನಾವಣೆ ನಡೆಯುವವರೆಗೂ ತಾತ್ಕಾಲಿಕವಾಗಿ ಆಡಳಿತ ನಡೆಸಲಿದೆ. ಹೊಸ ಆಡಳಿತ ಮಂಡಳಿಗೆ ಸಿಎಜೆ ಮಾಜಿ ಮುಖ್ಯಸ್ಥ ವಿನೋದ್ ರಾಯ್, ಭಾರತ ಮಹಿಳಾ ತಂಡದ ನಾಯಕಿ ಡಯಾನ, ಐಡಿಎಫ್‍ಸಿ ಬ್ಯಾಂಕ್‍ನ ವ್ಯವಸ್ಥಾಪಕ ವಿಕ್ರಮ್ ಲಿಮಾಯ್, ಪ್ರಸಿದ್ದ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರನ್ನೊಳಗೊಂಡ ಸಮಿತಿಯನ್ನು ನೇಮಕ ಮಾಡಿದೆ.

ಬಿಸಿಸಿಐಗೆ ಚುನಾವಣೆ ನಡೆಯಲಿದ್ದು, ದಿನಾಂಕ ಪ್ರಕಟವಾಗಿಲ್ಲ. ಅಲ್ಲಿಯವರೆಗೆ ಈ ನಾಲ್ಕು ಸದಸ್ಯರ ಸಮಿತಿ ಬಿಸಿಸಿಐನ ಆಡಳಿತ ನೋಡಿಕೊಳ್ಳಲಿದೆ. ನ್ಯಾ. ಲೋಧ ಶಿಫಾರಸ್ಸನ್ನು ಬಿಸಿಸಿಐ ಜಾರಿಗೆ ತರದ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್, ಕಾರ್ಯದರ್ಶಿ ಶ್ರೀಕೆ ಸೇರಿದಂತೆ ಅನೇಕರನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin