ಬಿಸಿಸಿಐ ಆಡಳಿತಗಾರರ ಹೆಸರು ಶಿಫಾರಸ್ಸು ಮಾಡಲು ನಾರಿಮನ್ ಬದಲಿಗೆ ದಿವಾನ್ ಅವರಿಗೆ ಸುಪ್ರೀಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Supre-Court-BCCI

ನವದೆಹಲಿ, ಜ.3-ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಆಡಳಿತಗಾರರ ಹೆಸರುಗಳ ಶಿಫಾರಸ್ಸಿಗೆ ನೆರವಾಗಲು ಖ್ಯಾತ ವಕೀಲ ಎಫ್.ಎಸ್.ನಾರಿಮನ್ ಬದಲಿಗೆ ಕಾರ್ಯನಿರ್ವಹಿಸುವಂತೆ ಹಿರಿಯ ವಕೀಲ ಅನಿಲ್ ದಿವಾನ್ ಅವರಿಗೆ ಸುಪ್ರೀಂಕೋರ್ಟ್ ಇಂದು ಸೂಚಿಸಿದೆ. ತಾವು 2009ರಿಂದಲೂ ಕ್ರಿಕೆಟ್ ಮಂಡಳಿಯನ್ನು ಪ್ರತಿನಿಧಿಸುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತಮಗೆ ಸಾಧ್ಯವಾಗುವುದಿಲ್ಲ ಎಂದು ನಾರಿಮನ್ ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ನಾರಿಮನ್‍ನ ಮನವಿಯನ್ನು ಪರಿಗಣಿಸಿದ ಪೀಠ ಬಿಸಿಸಿಐ ಕಾರ್ಯನಿರ್ವಹಣೆಗಾಗಿ ಆಡಳಿತಗಾರರ ಹೆಸರುಗಳ ಶಿಫಾರಸ್ಸಿಗೆ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಂ ಅವರಿಗೆ ಸಹಕಾರ ನೀಡುವಂತೆ ಅನಿಲ್ ದಿವಾನ್‍ಗೆ ಸೂಚನೆ ನೀಡಿತು.  ಎರಡು ವಾರಗಳ ಒಳಗೆ ಕ್ರಿಕೆಟ್ ಮಂಡಳಿಗೆ ಸಂಭವನೀಯ ಆಡಳಿತಗಾರರ ಹೆಸರುಗಳನ್ನು ಸಲಹೆ ಮಾಡುವಂತೆ ಇಬ್ಬರು ವಕೀಲರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.  ಲೋಧಾ ಸಮಿತಿ ಶಿಫಾರಸುಗಳನ್ನು ಜಾ ರಿಗೊಳಿಸಲು ವಿ¼ಂಬ ಮಾಡಿದ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ನಿನ್ನೆ ಸುಪ್ರೀಂಕೋರ್ಟ್ ವಜಾ ಗೊಳಿಸಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin