ಬಿಸಿಸಿಐ-ಲೋಧಾ ವಿಚಾರಣೆ ಡಿಸೆಂಬರ್ 9ಕ್ಕೆ ಮುಂದೂಡಿಕೆ
ನವದೆಹಲಿ, ಡಿ.5– ಬಿಸಿಸಿಐ ಹಾಗೂ ಲೋಧಾ ಸಮಿತಿ ನಡುವಿನ ಗುದ್ದಾಟದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಡಿಸೆಂಬರ್ 9ಕ್ಕೆ ಮುಂದೂಡಿದೆ. ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಈ ಪ್ರಕರಣ ಕುರಿತು ಮತ್ತಷ್ಟು ಮಾಹಿತಿ ಸಂಗ್ರಹಿಸುವಂತೆ ತಿಳಿಸಿ ವಿಚಾರಣೆಯನ್ನು ಮುಂದೂಡಿದೆ. ಬಿಸಿಸಿಐನ ಹಠಮಾರಿ ಧೋರಣೆ ಬಗ್ಗೆ ಈಗಾಗಲೇ ಲೋಧಾ ಸಮಿತಿಯು ಮೂರು ವಸ್ತುಸ್ಥಿತಿ ವರದಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದು ಇದರ ಅನ್ವಯ ಬಿಸಿಸಿಐನ ಹಣದ ವಹಿವಾಟಿಗೆ ಬ್ರೇಕ್ ಹಾಕಿದೆ. ಬಿಸಿಸಿಐನ ಸಾರ್ವಭೌಮತ್ವ ಧೋರಣೆಯ ಬಗ್ಗೆ ಪ್ರಸ್ತಾಪಿಸಿರುವ ಲೋಧಾ ಸಮಿತಿ ಬಿಸಿಸಿಐ ಅನ್ನು ಸೂಪರ್ಸೀಡ್ ಮಾಡುವಂತೆಯೂ ವರದಿ ಸಲ್ಲಿಸಿತ್ತು.
ಈ ಕುರಿತು ಕಳೆದ ಶುಕ್ರವಾರ ಬಿಸಿಸಿಐ ಸಭೆಯನ್ನು ನಡೆಸಿತ್ತು. ಆ ವೇಳೆ ಬಿಸಿಸಿಐನಲ್ಲಿ ಕಾರ್ಯನಿರ್ವಹಿಸುವವರ ವಯೋಮಿತಿ 70 ವರ್ಷಕ್ಕೆ ಸೀಮಿತ ಹಾಗೂ ಒಂದು ರಾಜ್ಯಕ್ಕೆ ಒಂದೇ ಮತ ಎಂಬ ನೀತಿಯನ್ನು ಎಲ್ಲಾ ರಾಜ್ಯಗಳ ಕ್ರಿಕೆಟ್ ಕಮಿಟಿಗಳು ವಿರೋಧಿಸಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿತು.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download