ಬಿಹಾರದಲ್ಲಿ ಕಳ್ಳಭಟ್ಟಿ ಸೇವಿಸಿ 13 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಪಾಟ್ನಾ, ಆ.17- ಕಳ್ಳಭಟ್ಟಿ ಸೇವಿಸಿ 13 ಮಂದಿ ಮೃತಪಟ್ಟು ಹಲವಾರು ಮಂದಿ ಅಸ್ವಸ್ಥರಾಗಿರುವ ಘಟನೆ ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ನಿನ್ನೆ ನಡೆದಿರುವುದಾಗಿ ಇಂದು ವರದಿಯಾಗಿದೆ. ಅಕ್ರಮ ಮದ್ಯ ಸೇವಿಸಿದ ನಂತರ ಇವರೆಲ್ಲರೂ ಮೃತಪಟ್ಟರು. ಕಳ್ಳಭಟ್ಟಿ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದರೂ ಕೂಡ ಮಾಫಿಯಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ ಎಂದು ಸಂತ್ರಸ್ತ ಕುಟುಂಬಗಳ ಸದಸ್ಯರು ಆರೋಪಿಸಿದ್ದಾರೆ.  ಆದಾಗ್ಯೂ, ಕಳ್ಳಭಟ್ಟಿ ದುರಂತ ಸಂಭವಿಸಿರುವುದನ್ನು ನಿರಾಕರಿಸಿರುವ ಬಿಹಾರ ಸರ್ಕಾರ, ಇದು ರೋಗ-ರುಜಿನದಿಂದ ಉಂಟಾದ ಸಾವು ಎಂದು ಹೇಳಿಕೆ ನೀಡಿದೆ. ಗೋಪಾಲಗಂಜ್ನಲ್ಲಿ ಮಂಗಳವಾರ ಆರು ಮಂದಿ ಮೃತಪಟ್ಟ ನಂತರ ಈ ದುರಂತವು ಬೆಳಕಿಗೆ ಬಂದಿದ್ದು, ಹೆಚ್ಚಿನ ತನಿಖೆಗೆ ಜಿಲ್ಲಾ ದಂಡಾಧಿಕಾರಿ ಆದೇಶಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin