ಬಿಹಾರದಲ್ಲಿ ಖಾಸಗಿ ಬಸ್‍ಗೆ ಬೆಂಕಿ, 9 ಮಂದಿ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Bus-Fire--01

ಪಾಟ್ನಾ, ಮೇ 26-ಬಿಹಾರದ ನಳಂದಾ ಜಿಲ್ಲೆಯಲ್ಲಿ ನಿನ್ನೆ ಸಂಜೆ ಖಾಸಗಿ ಬಸ್ಸೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಒಂದು ಮಗು ಸೇರಿದಂತೆ ಒಂಭತ್ತು ಮಂದಿ ಸಜೀವ ದಹನಗೊಂಡು, ಇತರ 11 ಪ್ರಯಾಣಿಕರು ಗಾಯಗೊಂಡಿದ್ದಾರೆ.   ಶೇಖ್‍ಪುರದಿಂದ ಪಾಟ್ನಾಗೆ ಬರುತ್ತಿದ್ದ ಬಸ್ ಸಂಜೆ 6.15ರಲ್ಲಿ ಹನೌತ್ ಬಜಾರ್‍ನ ವಿಶ್ವಕರ್ಮ ದೇವಸ್ಥಾನ ಬಳಿ ಬರುತ್ತಿದ್ದಂತೆ ಈ ದುರಂತ ಸಂಭವಿಸಿದ್ದು, ವಾಹನ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಗಾಯಾಳುಗಳನ್ನು ಜಿಲ್ಲಾ ಕೇಂದ್ರ ಬಿಹಾರಶರೀಫ್‍ನ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಪ್ರಯಾಣಿಕನೊಬ್ಬ ಸಾಗಿಸುತ್ತಿದ್ದ ಮಾವು ಇತ್ಯಾದಿಗಳನ್ನು ಕೃತಕವಾಗಿ ಹಣ್ಣಾಗಿಸಲು ಬಳಸುವ ಕಾಲ್ಷಿಯಂ ಕಾರ್ಬೈಡ್‍ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಮೃತಪಟ್ಟವರ ಕುಟುಂಬಗಳಿಗೆ ನಿತೀಶ್‍ಕುಮಾರ್ ತಲಾ ನಾಲ್ಕು ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ಧಾರೆ. ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin