ಬಿಹಾರದ ರಾಜಕೀಯ ಬೆಳವಣಿಗೆ ಕರ್ನಾಟಕ ಚುನಾವಣೆ ಮೇಲೂ ಪರಿಣಾಮ ಬೀರಲಿದೆಯೆ..?

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಬೆಂಗಳೂರು, ಜು.27- ಬಿಹಾರದಲ್ಲಿ ನಡೆದಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು 2018ರ ಕರ್ನಾಟಕ ವಿಧಾನಸಭೆ ಮೇಲೂ ಪರಿಣಾಮ ಬೀರಲಿದೆಯೆ….? ರಾಜಕಾರಣದಲ್ಲಿ ಅನಾದಿಕಾಲದಿಂದಲೂ ಚಾಲ್ತಿಯಲ್ಲಿರುವ ನಾಣ್ನುಡಿಯಂತೆ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂಬ ಮಾತು ಕಾಲ ಕಾಲಕ್ಕೆ ಹೆಚ್ಚು ಪ್ರಸ್ತುತವಾಗಿದೆ. ಅಂದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೇ ಬಾರದು. ಆಗೊಂದು ವೇಳೆ ಅತಂತ್ರ ಮೈತ್ರಿ ಪರಿಸ್ಥಿತಿ ನಿರ್ಮಾಣವಾದರೆ ನಾವು ಎಂಥಹದ್ದೇ ತ್ಯಾಗಕ್ಕೂ ಸಿದ್ಧ ಎಂಬ ಸಂದೇಶವನ್ನು ನರೇಂದ್ರ ಮೋದಿ- ಅಮೀತ್ ಷಾ ಜೋಡಿ ರವಾನಿಸಿದೆ.

ಒಂದು ಕಾಲದಲ್ಲಿ ನಾಯಕತ್ವದ ವಿರುದ್ ಬಂಡೆದ್ದು ಮೈತ್ರಿ ಪಕ್ಷದಿಂದ ಹೊರ ಬಂದಿದ್ದ ನಿತೀಶ್‍ಕುಮಾರ್ ಅವರನ್ನು ಪುನಃ ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವ ಮೂಲಕ ಮೋದಿ ಹೊಸ ರಾಜಕೀಯ ಸಮೀಕರಣಕ್ಕೆ ಮುನ್ನುಡಿ ಬರೆದಿದ್ದಾರೆ. ಬಿಹಾರದಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆ ಕೇವಲ ಯಾದವ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ರಾಷ್ಟ್ರ ರಾಜಕಾರಣಕ್ಕೆ ಹೊಸ ಸಂದೇಶವನ್ನು ನೀಡಿದೆ. ಸರಳವಾಗಿ ಹೇಳುವುದಾದರೆ ದೇಶದ ಯಾವುದೇ ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬಾರದು ಎಂಬುದು ಮೋದಿ-ಅಮಿತ್ ಷಾ ಜೋಡಿಯ ಲೆಕ್ಕಾಚಾರ. ಹೀಗಾಗಿಯೇ ತಮ್ಮನ್ನು ಶತ್ರುವಿನಂತೆ ನೋಡುತ್ತಿದ್ದ ನಿತೀಶ್‍ಕುಮಾರ್ ಅವರಂತಹ ನಾಯಕನನ್ನು ಒಪ್ಪಿಕೊಂಡು ಸರ್ಕಾರ ರಚನೆಗೆ ಸಮ್ಮತಿ ನೀಡಿದ್ದರು.

ಎನ್‍ಡಿಎ ವಿರುದ್ಧ ಮಹಾಘಟ್‍ಬಂಧನ್ ರಚಿಸಲು ಮುಂದಾಗಿದ್ದೇ ನಿತೀಶ್‍ಕುಮಾರ್ ಇದಕ್ಕೆ ಸಾಥ್ ನೀಡಿದ್ದು, ಲಾಲೂ ಪ್ರಸಾದ್ ಯಾದವ್ ಒಂದು ವೇಳೆ ಇದು ಯಶಸ್ವಿಯಾದರೆ 2019ರ ಲೋಕಸಭೆ ಚುನಾವಣೆಯಲ್ಲಿ ತಮಗೆ ಹೊಡೆತ ಬೀಳಲಿದೆ ಎಂಬುದನ್ನು ಚೆನ್ನಾಗಿ ಅರಿತಿದ್ದರು. ಬಿಹಾರದಲ್ಲಿ ಅಸ್ತಿತ್ವದಲ್ಲಿದ ಘಟ್‍ಬಂಧನ್ ಮುರಿದು ಬಿದ್ದಿರುವುದು ಕರ್ನಾಟಕದ ರಾಜಕೀಯ ಬೆಳವಣಿಗೆಯಲ್ಲಿ ಒಂದಿಷ್ಟು ಪರಿಣಾಮ ಬೀರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಮೈತ್ರಿಗೆ ಸಿದ್ಧ :

2018ರ ವಿಧಾನಸಭೆ ಚುನಾವಣೆಯಲ್ಲಿ ಸಧ್ಯಕ್ಕೆ ಯಾವುದೇ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಪ್ರಯತ್ನಕ್ಕೆ ಕೈ ಹಾಕುವ ಲಕ್ಷಣಗಳಿಲ್ಲ. ಹೀಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಸಧ್ಯಕ್ಕೆ ಯಾವುದೇ ಪಕ್ಷ ಸರ್ಕಾರ ಬಹುಮತ ಪಡೆಯುತ್ತೇವೆ ಎಂಬ ವಿಶ್ವಾಸದಲ್ಲಿಲ್ಲ. ಬಿಜೆಪಿಯ ಮಿಷನ್ 150, ಕಾಂಗ್ರೆಸ್‍ನ ಎರಡನೇ ಬಾರಿ ಅಧಿಕಾರಗದ್ದುಗೆ, ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಜೆಡಿಎಸ್‍ನ ಉದ್ದೇಶಗಳು ಈಡೇರುವ ಲಕ್ಷಣಗಳು ಕಾಣುತ್ತಿಲ್ಲ.
ದೇಶವನ್ನು ಕಾಂಗ್ರೆಸ್‍ನಿಂದ ಮುಕ್ತಗೊಳಿಸಲು ನರೇಂದ್ರ ಮೋದಿ -ಅಮಿತ್‍ಷಾ ಯಾವುದಕ್ಕೂ ಸಿದ್ದ ಎಂಬುದನ್ನು ಬಿಹಾರದಲ್ಲಿ ಮಾಡಿ ತೋರಿಸಿದ್ದಾರೆ.

ಇದೇ ರೀತಿ ಕರ್ನಾಟಕದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ಜತೆ ನಾವು ದೋಸ್ತಿಗೆ ಸಿದ್ಧ ಎಂಬ ಸಂದೇಶವನ್ನು ನೀಡಲಾಗಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಕಾಲವೇ ನಿರ್ಧರಿಸಬೇಕು.  ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಯಾವುದೇ ತ್ಯಾಗ ಮಾಡಲು ಪಕ್ಷ ಸಿದ್ಧವಿದೆ ಎಂಬುದನ್ನು ಉಭಯ ನಾಯಕರು ಬಿಹಾರದಿಂದಲೇ ಆರಂಭಿಸಿದ್ದಾರೆ. ಮುಂದೆ ಈ ಜೋಡಿ ಎಲ್ಲೆಲ್ಲಿ ಕಾಂಗ್ರೆಸ್‍ಗೆ ಹೊಡೆತ ಕೊಡಲಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin