ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಸಿಡಿಲಿನ ಅಬ್ಬರಕ್ಕೆ 23 ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

thunderstorm

ಪಾಟ್ನಾ, ಮೇ 29- ಬಿಹಾರದ ವಿವಿಧ ಜಿಲ್ಲೆಗಳು ಭಾರೀ ಗಾಳಿ ಮತ್ತು ಮಳೆಯಿಂದ ತತ್ತರಿಸಿವೆ. ವಿವಿಧ ಪ್ರಕರಣಗಳಲ್ಲಿ ಸಿಡಿಲಿನ ಹೊಡೆತಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 23ಕ್ಕೇರಿದೆ. ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟಯಾ ಮತ್ತು ಜಮೂಯಿಯಲ್ಲಿ ತಲಾ ಆರು ಮಂದಿ, ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹರಿಯಲ್ಲಿ ಐವರು, ಭಗಲ್ಪುರದಲ್ಲಿ ನಾಲ್ವರು ಹಾಗೂ ವೈಶಾಲಿ ಮತ್ತು ಸಮಷ್ಟಿಪುರದಲ್ಲಿ ತಲಾ ಒಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.



ಗಾಯಗೊಂಡ ಕೆಲವು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin