ಬಿ.ಎಡ್‍ ವಿದ್ಯಾರ್ಥಿಗಳಿಗೆ ಬಸ್, ಪಾಸ್ ಅವಧಿ ವಿಸ್ತರಿಸಲು ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

pass

ತಿಪಟೂರು, ಮಾ.4-ಬಿ.ಎಡ್‍ನಲ್ಲಿ ವ್ಯಾಸಂಗವಾಡುತ್ತಿರುವ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಅವಧಿಯನ್ನು ವಿಸ್ತರಿಸಬೇಕೆಂದು ಬಸವೇಶ್ವರ ಬಿ.ಎಡ್. ಕಾಲೇಜು ಹಾಗೂ ಕಲ್ಪತರು ಬಿ.ಎಡ್.ಕಾಲೇಜಿನ ವಿದ್ಯಾರ್ಥಿಗಳು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಗ್ರಾಮಿಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶೈಕ್ಷಣಿಕ ಪ್ರಗತಿ, ಸಾಧನೆಗಾಗಿ ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದೊಂದಿಗೆ ಒಪ್ಪಂದ ಮಾಡಿಕೊಂಡು ಕಡಿಮೆ ದರದಲ್ಲಿ ಮಾಸಿಕ ಬಸ್ ಪಾಸ್ ಸೌಲಭ್ಯವನ್ನು ಒದಗಿಸುತ್ತಾ ಬಂದಿದೆ. ಆದರೆ ಬಿಎಡ್ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದಲ್ಲಿ ಬದಲಾವಣೆಯಿದ್ದು ಆಗಸ್ಟ್‍ನಿಂದ ಮೇ ತಿಂಗಳ ವರೆವಿಗೆ ಕಾಲೇಜು ನಡೆಯುತ್ತದೆ. ಆದರೆ ಪ್ರಸ್ತುತ ಇರುವಂತಹ ಪಾಸ್ ಅವಧಿಯು ಮಾರ್ಚ್ ಅಂತ್ಯಕ್ಕೆ ಮುಗಿದು ಹೋಗುತ್ತದೆ.

ಆದ ಕಾರಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿದ್ಯಾರ್ಥಿಗಳಿಗಾಗಿ ಬಸ್ ಪಾಸ್ ಅವಧಿಯನ್ನು ಪ್ರತ್ಯೇಕ ಹಣ ಪಡೆದು 2 ತಿಂಗಳು ವಿಸ್ತರಿಸಬೇಕು. ಇದರಿಂದಾಗಿ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು ಶೈಕ್ಷಣಿಕ ಪ್ರಗತಿಗೂ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.ಕೂಡಲೇ ಬಿಎಡ್.ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಿಸಬೇಕೆಂದು ಉಪ ವಿಭಾಗಾಧಿಕಾರಿ ಆರ್.ಶಿಲ್ಪರವರಿಗೆ ಮನವಿ ಸಲ್ಲಿಸಿದರು.ಮನವಿ ಸಲ್ಲಿಸುವಾಗ ವಿದ್ಯಾರ್ಥಿಗಳಾದ ವೇಣುಗೋಪಾಲ್, ಮನೋಜ್, ರಾಮಚಂದ್ರ, ಶಶಿಕುಮಾರ್, ಹನುಮಂತರಾಯಪ್ಪ, ಜೆಡಿಎಸ್ ಮುಖಂಡ ಲಿಂಗರಾಜು, ಗುರುಪ್ರಸನ್ನ, ಅಶೋಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin