ಬೀಡಿ ಎಲೆ ಗೋದಾಮಿಗೆ ನಕ್ಸಲರ ಬೆಂಕಿ, 9 ಕೋಟಿ ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

ಗರಿಯಾಬಂದ್, ಜೂ.12- ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ ಮುಂದುವರೆದಿದೆ.  ಗರಿಯಾಬಂದ್ ಜಿಲ್ಲೆಯ ಗ್ರಾಮವೊಂದರ ಅರಣ್ಯ ಇಲಾಖೆಯ ಗೋದಾಮಿನ ಮೇಲೆ ದಾಳಿ ನಡೆಸಿದ ನಕ್ಸಲರು ಬೀಡಿ ಎಲೆಗಳಿದ್ದ ಸಂಗ್ರಹಾಗಾರಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಇದರಿಂದ 9 ಕೋಟಿ ರೂ. ಮೌಲ್ಯಗಳಷ್ಟು ಬೀಡಿ ಎಲೆ ದಾಸ್ತಾನು ಸುಟ್ಟು ಭಸ್ಮವಾಗಿದೆ. ಗರಿಯಾಬಂದ್‍ನ ನವಾಬುವಾ ಗ್ರಾಮದ ಅರಣ್ಯ ಇಲಾಖೆಯ ಗೋದಾಮಿಗೆ ನಿನ್ನೆ ತಡರಾತ್ರಿ ದಾಳಿ ನಡೆಸಿದ ನಕ್ಸಲರು ಮೂವರು ವನಪಾಲಕರನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಗೋದಾಮಿನ ಬೀಗ ಒಡೆದು 1,700 ಗೋಣಿಚೀಲಗಳಲ್ಲಿ ತುಂಬಿಟ್ಟಿದ್ದ ಬೀಡಿ ತಯಾರಿಕೆ ಎಲೆಗಳಿಗೆ ಬೆಂಕಿ ಹಚ್ಚಿ ಬೂದಿ ಮಾಡಿದರು ಎಂದು ಅರಣ್ಯಾಧಿಕಾರಿ ಟಿ.ಜೆ.ಭಗತ್ ಹೇಳಿದ್ದಾರೆ. ಸುಮಾರು 12 ಜನರ ನಕ್ಸಲರ ತಂಡದಲ್ಲಿ ಮಹಿಳೆಯರು ಕೂಡ ಇದ್ದರು ಎಂದು ಫಾರೆಸ್ಟ್ ಗಾರ್ಡ್‍ವೊಬ್ಬರು ಹೇಳಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ