ಬೀಡುಬಿಟ್ಟ ಒಂಟಿಸಲಗ : ಗ್ರಾಮಸ್ಥರಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

elephant

ಕೋಲಾರ, ಆ.30-ಒಂಟಿ ಸಲಗವೊಂದು ಬಂಗಾರಪೇಟೆ ತಾಲೂಕಿನ ಹರಟ್ಟಿ ಗ್ರಾಮದಲ್ಲಿ ಬೀಡುಬಿಟ್ಟಿದ್ದು ಜನರಲ್ಲಿ ಆತಂಕವುಂಟು ಮಾಡಿದೆ. ಅರಣ್ಯ ಅಧಿಕಾರಿಗಳು ಅದನ್ನು ಹಿಮ್ಮೆಟ್ಟಿಸಲು ಹರಸಾಹಸಪಡುತ್ತಿದ್ದಾರೆ.  ತಮಿಳುನಾಡಿನ ಅರಣ್ಯ ಪ್ರದೇಶದಿಂದ ಆನೆಯ ಹಿಂಡು 4 ದಿನಗಳ ಹಿಂದೆ ಆಹಾರ ಅರಸಿ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗ್ರಾಮಕ್ಕೆ ಬಂದು ಅಲ್ಲಿಂದ ಒಂಟಿ ಸಲಗ ಕೋಲಾರ ತಾಲೂಕಿನ ಹರಟ್ಟಿ, ಮಲ್ಲಂದಳ್ಳಿ ಕಡೆಗೆ ಬಂದು ಬೀಡುಬಿಟ್ಟಿದ್ದು,ಅರಣ್ಯ ಇಲಾಖೆ ಅದನ್ನು ಹಿಮ್ಮೆಟ್ಟಿಸಲು ಶ್ರಮಿಸುತ್ತಿದ್ದಾರೆ.  ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಅರಣ್ಯಾಧಿಕಾರಿ ರಾಮಲಿಂಗೇಗೌಡ ಇಂದು ಸಂಜೆಯವರೆಗೂ ಪರಿಸ್ಥಿತಿ ಗಮನಿಸಿ, ನಂತರ ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ತರಬೇತಿ ಪಡೆದ ಆನೆಯನ್ನು ಕರೆಯಿಸಿ ಒಂಟಿ ಸಲಗವನ್ನು ಹಿಮ್ಮೆಟ್ಟಿಸುವುದಾಗಿ ತಿಳಿಸಿದರು.ಇದರಿಂದ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.

ಇದರ ಓಡಾಟ ಕಡಿಮೆ ಇದೆ. ಬಹುಶಃ ಅನಾರೋಗ್ಯವಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.  ಬಂಗಾರಪೇಟೆ ತಾಲೂಕಿನಲ್ಲಿ ಅರಣ್ಯ ಪ್ರದೇಶ ಒಳಗೊಂಡಂತೆ ಕಾಮಸಮುದ್ರ ವೈಲ್ಡ್ ಲೈಫ್ ಸೆಂಚುರಿ ಮಾಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಸಚಿವ ಸಂಪುಟದಲ್ಲಿ ಅನುಮೋದನೆ ಸಿಗುವುದರಲ್ಲಿದೆ ಎಂದು ಹೇಳಿದರು.ರಾಜ್ಯದಲ್ಲಿ ಅರಣ್ಯ ಪ್ರದೇಶವನ್ನು ಗುರುತಿಸಿ ಆನೆ ನಿರೋಧಕ ಕಂದಕವನ್ನು ನಿರ್ಮಿಸಿ ಆನೆ ಹಾವಳಿ ತಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin