ಬೀದರ್ ಬಳಿ ಹಳಿ ತಪ್ಪಿದ ಔರಂಗಾಬಾದ್-ಹೈದರಾಬಾದ್ ರೈಲು

ಈ ಸುದ್ದಿಯನ್ನು ಶೇರ್ ಮಾಡಿ

Bidar-Train--01 ಹೈದರಾಬಾದ್/ಬೀದರ್, ಏ.21-ಔರಂಗಾಬಾದ್-ಹೈದರಾಬಾದ್ ಪ್ಯಾಸೆಂಬರ್ ರೈಲಿನ ಮೂರು ಬೋಗಿಗಳು ಮತ್ತು ಎಂಜಿನ್ ಹಳಿ ತಪ್ಪಿದ ಘಟನೆ ಇಂದು ಮುಂಜಾನೆ ಬೀದರ್ ಬಳಿ ಸಂಭವಿಸಿದೆ. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.  ಸಿಕಂದರಾಬಾದ್ ವಿಭಾಗದ ಪರ್ಲಿ-ವಿಕಾರಾಬಾದ್ ಉಪ ವಿಭಾಗದ ಬೀದರ್‍ನ ಕಳಗಪುರ-ಭಾಲ್ಕಿ ರೈಲು ನಿಲ್ದಾಣಗಳ ನಡುವೆ ಮುಂಜಾನೆ 1.50ರಲ್ಲಿ ರೈಲು ಹಳಿ ತಪ್ಪಿತು. ಯಾರಿಗೂ ಗಾಯಗಳಾಗಿಲ್ಲ. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ದಕ್ಷಿಣ ಮಧ್ಯ ರೈಲ್ವೆ (ಎ¸ಸಿಆರ್) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ. ಉಮಾಶಂಕರ್ ತಿಳಿಸಿದ್ದಾರೆ.ಈ ಮಾರ್ಗದಲ್ಲಿ ದುರಸ್ತಿ ಕಾರ್ಯ ಸಮರೋಪಾದಿಯಲ್ಲಿ ಸಾಗಿದ್ದು, ಕಳಗಪುರದಿಂದ ಬೀದರ್‍ಗೆ ತೆರಳಲು ಪ್ರಯಾಣಿಕರಿಗೆ ವಿಶೇಷ ಬಸ್ ಸೌಲಭ್ಯ ವ್ಯವಸ್ಥೆ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.   ಎಸ್‍ಸಿಆರ್ ಜನರಲ್ ಮ್ಯಾನೇಜರ್ ವಿನೋದ್ ಕುಮಾರ್ ಯಾದವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.   ರೈಲಿನ ಎಂಜಿನ್ ಮತ್ತು ನಾಲ್ಕು ಬೋಗಿಗಳು ಹಳಿ ತಪ್ಪಿದ್ದರಿಂದ ಬೀದರ್-ಹೈದರಾಬಾದ್ ಇಂಟರ್‍ಸಿಟಿ ಎಕ್ಸ್‍ಪ್ರೆಸ್ ಸಂಚಾರ ವೇಳೆಯನ್ನು ಬದಲಿಸಲಾಗಿದೆ. ಇನ್ನೂ ಕೆಲವು ರೈಲುಗಳ ಮಾರ್ಗವನ್ನು ಪರಿವರ್ತಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Bidar-Train--02

Facebook Comments

Sri Raghav

Admin