ಬೀದಿಗೆ ಬಂದ ವಿರಳ, ವಿಚಿತ್ರ, ವಿಲಕ್ಷಣ ಜೀವಿ

ಈ ಸುದ್ದಿಯನ್ನು ಶೇರ್ ಮಾಡಿ
ಯಾವುದೀ ಜೀವಿಯು..? ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುವುದು ಸಾಮಾನ್ಯ ಸಂಗತಿ. ಆದರೆ ಪೆರುವಿನ ಪುಕಾಲ್ಪಾ ಪಟ್ಟಣದಲ್ಲಿ ವಿಚಿತ್ರ, ವಿಲಕ್ಷಣ, ವಿರಳ ಸಸ್ತನಿಯೊಂದು ಕಾಣಿಸಿಕೊಂಡು ಜನರಲ್ಲಿ ಅಚ್ಚರಿ ಮೂಡಿಸಿತು. ಈ ಪಟ್ಟಣದಲ್ಲಿ ಇತ್ತೀಚೆಗೆ ಒಂದು ದಿನ ಬೆಳಿಗ್ಗೆ ಪಟ್ಟಣದ ಜನರಿಗೆ ಅಚ್ಚರಿ ಕಾದಿತ್ತು. ವಿಲಕ್ಷಣವಾದ ಆದರೆ ಅಷ್ಟೇ ಮೃದು ಸ್ವಭಾವದ ಸ್ಲಾತ್ ಸಸ್ತನಿಯೊಂದು ಕಾಣಿಸಿಕೊಂಡಿತು. ಇಂಥ ಪ್ರಾಣಿಯನ್ನು ನೀವೂ ನೋಡಿರಿಲಿಕ್ಕಿಲ್ಲ ಅಂಗಡಿ ಮಾಲೀಕನೊಬ್ಬ ಬೆಳಿಗ್ಗೆ ತನ್ನ ಮಳಿಗೆಯನ್ನು ತೆಗೆಯಲು ಬಂದಾಗ ಈ ಜೀವಿಯನ್ನು ನೋಡಿ ಹೆದರಿದ. ಈ ಜನರ ಗುಂಪನ್ನು ನೋಡಿ ಈ ವಿಚಿತ್ರ ಪ್ರಾಣಿಯೂ ಬೆದರಿ ಗೋಡೆಗೆ ನೇತು ಹಾಕಿಕೊಂಡಿತ್ತು. ನಂತರ ವನ್ಯಜೀವಿ ಸಿಬ್ಬಂದಿಗೆ ಸ್ಥಳೀಯರು ಸುದ್ದಿ ಮುಟ್ಟಿಸಿದರು.ಈ ಪ್ರಾಣಿಯು ನಗರದ ಸಮೀಪದ ಅರಣ್ಯದಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದಿತ್ತು. ವನ್ಯಜೀವಿ ಸಿಬ್ಬಂದಿ ಇದನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು. ಈ ಸೋಮಾರಿ ಪ್ರಾಣಿಯು ಬ್ರ್ಯಾಡಿಪೋಡಿಡೇ ಅಥವಾ ಮೆಗಲೋನಿಕಿಡೇ ವಂಶಕ್ಕೆ ಸೇರಿದ್ದಾಗಿದೆ. ಮರದ ಕೊಂಬೆಗಳಿಂದ ತಲೆಕೆಳಗಾಗಿ ನೇತಾಡಲು ಅನುಕೂಲವಾದ ಬಾಗಿದ ಉದ್ದನೆ ಉಗುರುಗಳು, ಉದ್ದನೆ ಕಾಲುಗಳು ಹಾಗೂ ನೀಳ ಕೂದಲನ್ನು ಇದು ಹೊಂದಿರುತ್ತದೆ. ನೋಡಲು ಭಯಂಕರವಾಗಿ ಕಾಣುವ ಇದು ನಿರುಪದ್ರವಿ. ನೆಲದ ಮೇಲೆ ನಿಧಾನವಾಗಿ ಸಂಚರಿಸುವ ನಿಶಾಚರಿಯಾದ ಇದು ದಕ್ಷಿಣ ಅಮೆರಿಕದ ಒಂದು ಸಸ್ತನಿ. ಈ ಪ್ರಬೇಧವು ಅವಸಾನದ ಅಂಚಿನಲ್ಲಿರುವುದು ದುರದೃಷ್ಟಕರ.

Facebook Comments

Sri Raghav

Admin