ಬೀದಿಬದಿ ಮಾರುವ ಗೋಬಿ ಮಂಚೂರಿ, ಫ್ರೈಡ್‍ರೈಸ್ ನಿಷೇಧಕ್ಕೆ ಸರ್ಕಾರ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Gobi

ಬೆಂಗಳೂರು, ಮಾ.20- ಚೈನೀಸ್ ರೆಸ್ಟೋರೆಂಟ್ ಹಾಗೂ ಬೀದಿ ಬದಿ ಮಾಡುವ ಗೋಬಿ ಮಂಚೂರಿ, ಫ್ರೈಡ್‍ರೈಸ್ ಸೇರಿದಂತೆ ಕೆಲವು ಆಹಾರ ಪದಾರ್ಥಗಳಲ್ಲಿ ರುಚಿವರ್ಧಕ ಮತ್ತು ಹಲವು ಪದಾರ್ಥಗಳನ್ನು ಬಳಸುತ್ತಿದ್ದು, ಇವು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಇವುಗಳನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ರಮೇಶ್‍ಕುಮಾರ್ ತಿಳಿಸಿದರು.  ಸದಸ್ಯ ರಾಮಚಂದ್ರಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗೋಬಿ ಮಂಚೂರಿ, ಫ್ರೈಡ್‍ರೈಸ್ ಮೊದಲಾದ ಆಹಾರ ಪದಾರ್ಥಗಳಲ್ಲಿ ಮೋನೋ ಸೋಡಿಯಂ, ಜ್ಲುಟೋಮೇಟ್, ರುಚಿವರ್ಧಕ ರಾಸಾಯನಿಕ ವಸ್ತುಗಳನ್ನು ಬಳಸುತ್ತಿದ್ದಾರೆ. ಇದರಿಂದ ತಲೆನೋವು, ಹೊಟ್ಟೆ ತೊಳೆಸುವುದು, ಅತಿಯಾದ ಬೆವರುವಿಕೆ, ಎದೆ ನೋವು, ತಲೆ ಸುತ್ತುವುದು ಹಾಗೂ ನಿಶ್ಯಕ್ತಿ ಸೇರಿದಂತೆ ಮತ್ತಿತರ ಸಮಸ್ಯೆಗಳು ಉಂಟಾಗುತ್ತವೆ ಎಂದರು.

ರುಚಿವರ್ಧಕ ಪದಾರ್ಥಗಳನ್ನು ಬಳಸುವುದರಿಂದ ದಿನದಿಂದ ದಿನಕ್ಕೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ರಾಸಾಯನಿಕ ಪದಾರ್ಥಗಳನ್ನು ನಿಯಮಿತವಾಗಿ ಬಳಸಲು ನಿಯಮ ರೂಪಿಸುವ ಅಗತ್ಯವಿದೆ ಎಂದು ಕೆ.ಆರ್.ರಮೇಶ್‍ಕುಮಾರ್ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin