ಬೀದಿ ಕಲಾವಿದನ ಭಿತ್ತಿ ಚಿತ್ರ ಸೃಷ್ಟಿಸಿದ ವಿಶ್ವದಾಖಲೆ

ಈ ಸುದ್ದಿಯನ್ನು ಶೇರ್ ಮಾಡಿ

amaz

ಬ್ರೆಜಿಲ್‍ನ ರಿಯೋ ಡಿ ಜನೈರೋದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಅಸಂಖ್ಯಾತ ಚಟುವಟಿಕೆಗಳು ನಡೆದವು. ಹಾಗೆಯೇ ಬ್ರೆಜಿಲ್‍ನ ಬೀದಿ ಕಲಾವಿದ ತನ್ನ ಬಳಗದೊಂದಿಗೆ ಸೃಷ್ಟಿಸಿದ ಅತಿದೊಡ್ಡ ಭಿತ್ತಿ ಚಿತ್ರ ವಿಶ್ವದಾಖಲೆಗೆ ಪಾತ್ರವಾಗಿದೆ. ಬ್ರೆಜಿಲ್‍ನ ಸ್ಟ್ರೀಟ್ ಆರ್ಟಿಸ್ಟ್ ಎಡ್ವಾರ್ಡೊ ಕೋಬ್ರಾ, ರಿಯೋ ಒಲಿಂಪಿಕ್ ಕ್ರೀಡಾಕೂಟದ ವೇಳೆಗೆ ವಿಶ್ವದ ಅತಿದೊಡ್ಡ ಗೋಡೆ ಚಿತ್ರಗಳನ್ನು ಸೃಷ್ಟಿಸಲು ತನ್ನ ತಂಡದೊಂದಿಗೆ ಹಗಲುರಾತ್ರಿ ಕಾರ್ಯನಿರ್ವಹಿಸಿದ್ದನು. 

ಕೋಬ್ರಾ ಮತ್ತು ಆತನ ಬಳಗವು ಸೃಷ್ಟಿಸಿರುವ 9843 ಅಡಿ ಅಳತೆಯ ಚೌಕ ಭಿತ್ತಿ ಚಿತ್ರಕ್ಕೆ ಎಥ್ನಿಸಿಟೀಸ್ ಎಂದು ಹೆಸರಿಡಲಾಗಿದ್ದು, ವಿವಿಧ ಖಂಡಗಳ ಐವರು ದೇಶೀಯ ಜನರ ಮುಖಗಳನ್ನು ಅದರಲ್ಲಿ ಪ್ರತಿಬಿಂಬಿಸಲಾಗಿದೆ. ಉತ್ತರ ಮತ್ತು ದಕ್ಷಿಣ ಅಮೆರಿಕಗಳು, ಯುರೋಪ್, ಏಷ್ಯಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾ- ಈ ಐದು ಖಂಡಗಳ ಒಲಿಂಪಿಕ್ ರಿಂಗ್‍ಗಳನ್ನು ಇದು ಸಾಂಕೇತಿಕರಿಸಿತ್ತು. ಬ್ರೆಜಿಲ್‍ನ ಸಾವೊ ಪೌಲೊ ನಿವಾಸಿಯಾದ ಕೋಬ್ರಾ, ಚಿತ್ರ ವಿಚಿತ್ರ ಚಿತ್ರದರ್ಶಕ-ಕಲೈಡೋಸ್ಕೋಪ್ ಭಿತ್ತಿ ಚಿತ್ರ ರಚಿಸುವಲ್ಲಿ ಸಿದ್ಧಹಸ್ತ. 20ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ಈತನ ಭವ್ಯ ಕಲಾಕೃತಿಗಳು ಸೃಷ್ಟಿಯಾಗಿವೆ. ನ್ಯೂಯಾರ್ಕ್‍ನಲ್ಲಿನ `ದಿ ಕಿಸ್’ ಮತ್ತು ಲಾಸ್ ಏಂಜೆಲಿಸ್‍ನ ಅಲ್ಬರ್ಟ್ ಐನ್‍ಸ್ಟೀನ್ ಭಾವಚಿತ್ರಗಳು ಈತನ ಕಲಾಪ್ರೌಢಿಮೆಗೆ ಸಾಕ್ಷಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin