ಬೀದಿ ಕಾಮಣ್ಣರ ನಿಗ್ರಹಕ್ಕೆ ಬರುತ್ತಿದೆ ಬಿಜೆಪಿ ‘ಆಂಟಿ ರೋಮಿಯೋ’ ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

BJP-Romeo

ಲಕ್ನೋ, ಫೆ.1-ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಗೆದ್ದರೆ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವ ಆ್ಯಂಟಿ ರೋಮಿಯೋ ಪಡೆ ರಚಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.  ವಾರ್ತಾವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಪಡೆಯು ಕೋಮು ಸ್ವರೂಪದ್ದಾಗಿರುವುದಿಲ್ಲ. ಪ್ರತಿ ಹಳ್ಳಿ, ಪಟ್ಟಣ ಮತ್ತು ನಗರಗಳಲ್ಲಿರುವ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಈ ಪಡೆ ರಚಿಸಲಾಗುವುದು ಎಂದು ತಿಳಿಸಿದ್ದಾರೆ.

2014ರ ಲೋಕಸಭೆ ಚುನಾವಣೆ ವೇಳೆ ಲವ್ ಜಿಹಾದ್ ವಿರುದ್ಧ ಬಿಜೆಪಿ ಅಸ್ತ್ರ ಪ್ರಯೋಗಿಸಿತ್ತು. ಮುಸ್ಲಿಂ ಯುವಕರು ಹಿಂದು ಯುವತಿಯನ್ನು ಆಕರ್ಷಿಸಿ ಮತಾಂತರಕ್ಕೆ ಈಗಲೂ ಮುಂದಾಗಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದರು.   ಇದೇ ವೇಳೆ ಗೋವುಗಳ ಕಳ್ಳಸಾಗಣೆ ಮತ್ತು ಹತ್ಯೆ ತಡೆಯುವುದು ನಮ್ಮ ಉದ್ದೇಶ ಎಂದು ಪುನರುಚ್ಚರಿಸಿದ ಅವರು, ಸಂವಿಧಾನಾತ್ಮಕ ಕ್ರಮಗಳ ಮೂಲಕವೇ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin