ಬೀದಿ ನಾಟಕಗಳ ಮೂಲಕ ಆರೋಗ್ಯ ಭಾಗ್ಯ ಜಾಗೃತಿ

ಈ ಸುದ್ದಿಯನ್ನು ಶೇರ್ ಮಾಡಿ

vijayapura

ವಿಜಯಪುರ, ಆ.10-ಪಟ್ಟಣ ಸೇರಿದಂತೆ ಕೋರಮಂಗಲ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಬೀದಿ ನಾಟಕಗಳ ಮೂಲಕ ಆರೋಗ್ಯ ಜಾಗೃತಿ ಹಾಗೂ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಸಮರ್ಪಣಾ ಕಲಾ ತಂಡದವರು ಅರಿವು ಮೂಡಿಸಿದರು.ಈ ವೇಳೆ ಸುವರ್ಣ ಆರೋಗ್ಯ ಟ್ರಸ್ಟ್‍ನ ಆರೋಗ್ಯ ಮಿತ್ರ ರಾಜಣ್ಣ ಮಾತನಾಡಿ, ಸರಕಾರವು ರಾಜ್ಯದ ಎಲ್ಲಾ ಬಡ-ಬಗ್ಗರಿಗೂ ಉನ್ನತ ಮಟ್ಟದ ಆರೋಗ್ಯ ಭಾಗ್ಯ ಸಿಗಬೇಕೆಂಬುವ ಉದ್ದೇಶದಿಂದ ವಾಜಪೇಯಿ ಆರೋಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ, ಜ್ಯೋತಿ ಸಂಜೀವಿನಿ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ, ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.

ಇದರಲ್ಲಿ ಹೃದಯ ರೋಗ, ಕ್ಯಾನ್ಸರ್, ಮೂತ್ರಪಿಂಡ ತೊಂದರೆ, ಸುಟ್ಟ ಗಾಯ, ನರರೋಗ ಶಸ್ತ್ರ ಚಿಕಿತ್ಸೆ, ನವಜಾತ ಶಿಶುಗಳಿಗೆ ಸಂಬಂಧಿಸಿದ ಖಾಯಿಲೆಗಳಿಗೆ ಉಚಿತ ಚಿಕಿತ್ಸೆಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.  ಮಂಡ್ಯದ ಸಮರ್ಪಣಾ ಕಲಾತಂಡದ ನಾರಾಯಣಸ್ವಾಮಿ, ಸಂಜೀವ್, ಸುಮಂತ್, ಸುಜಾತ, ಬಸವರಾಜ್, ಪ್ರಸಾದ್ ಭಾಗವಹಿಸಿದ್ದರು.

Facebook Comments

Sri Raghav

Admin