ಬೀದಿ ನಾಯಿಗಳಿಂದ ಬಚಾವಾದರೂ ಬದುಕುಳಿಯಲಿಲ್ಲ ಜಿಂಕೆ

ಈ ಸುದ್ದಿಯನ್ನು ಶೇರ್ ಮಾಡಿ

Jinke--01

ಹನೂರು, ಫೆ.24- ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯೊಂದು ಬೀದಿ ನಾಯಿಗಳಿಗೆ ಸಿಕ್ಕಿ ಗಾಯಗೊಂಡಿದ್ದ ಜಿಂಕೆಯನ್ನು ಗ್ರಾಮಸ್ಥರು ಜಿಂಕೆಯನ್ನು ರಕ್ಷಿಸಿದರೂ ಅರಣ್ಯ ಅಧಿಕಾರಿಗಳ ವಿಳಂಬದಿಂದ ಸಾವನ್ನಪ್ಪಿರುವ ಘಟನೆ ಬೆಳತ್ತೂರು ಗ್ರಾಮದಲ್ಲಿ ನಡೆದಿದೆ. ತಾಲ್ಲೂಕಿನ 3-4 ಕಿ.ಮೀ.ದೂರ ಇರುವ ಬೆಳತ್ತೂರು ಗ್ರಾಮ ಹೊರ ವಲಯ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನ ಕೆರೆ ಬಳಿ ಕಾಡಿಗೆ ತೆರಳುತ್ತಿದ್ದ ಜಿಂಕೆಯನ್ನು ಐದಾರು ಬೀದಿ ನಾಯಿಗಳು ಅಟ್ಟಾಡಿಕೊಂಡು ಜಿಂಕೆಯನ್ನು ಕಚ್ಚಿ ತೀವ್ರ ಗಾಯಗೊಳಿಸಿದ್ದವು.  ಆ ವೇಳೆ ಗ್ರಾಮಸ್ಥರು ಜಿಂಕೆ ರಕ್ಷಣೆಗೆ ಧಾವಿಸಿ ಬೀದಿ ನಾಯಿಗಳಿಂದ ಜಿಂಕೆಯನ್ನು ರಕ್ಷಿಸಿ ಚಿಕಿತ್ಸೆ ನೀಡುವಂತೆ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಫೋನ್ ಕರೆ ಮಾಡಿ ತಿಳಿಸಿದರು. ಆದರೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬಾರದೇ ಎರಡು ಗಂಟೆ ತಡವಾಗಿ ಆಗಮಿಸಿದ್ದರಿಂದ ಜಿಂಕೆ ಸಾವನ್ನಪ್ಪಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಅದರೆ ಆರ್‍ಎಫ್‍ಒ ಮದುವೆಗಾಗಿ ಸಿಬ್ಬಂದಿಗಳು ರಜೆ ಮೇಲೆ ತೆರಳಿದ್ದು, ರಾತ್ರಿ ಕಾವಲುಗಾರರು ಬಿಟ್ಟರೇ ಯಾರೂ ಇರಲಿಲ್ಲ. ನಂತರ ಗಾರ್ಡ್ ತೀರ್ಥ ಪ್ರಸಾದ್ ಆಗಮಿಸಿದರು ಅವರಿಗೆ ವಿಷಯ ತಿಳಿಸಿದರು. ಇಲಾಖೆ ವಾಹನ ಇಲ್ಲದೇ ಖಾಸಗಿ ವಾಹನದಲ್ಲಿ ಸ್ಥಳಕ್ಕೆ ತೆರಳಿದರು. ಜಿಂಕೆಯ ಸಾವಿಗೆ ಅಧಿಕಾರಿಗಳ ವಿಳಂಬ ನೀತಿಯೇ ಕಾರಣ ಹಾಗೂ ಸರ್ಕಾರಿ ಜೀಪ್ ಎಲ್ಲಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಘೇರಾವ್ ಮಾಡಿದರು. ನಂತರ ಸರ್ಕಾರಿ ಜೀಪ್ ಹೋದ ಮೇಲೆ ಜಿಂಕೆಯ ದೇಹವನ್ನು ಅವರಿಗೆ ನೀಡಿದರು. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಹೋಗಿದ್ದರೆ ಜಿಂಕೆಯ ಪ್ರಾಣ ಉಳಿಸಬಹುದಿತ್ತು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Facebook Comments

Sri Raghav

Admin