‘ಬೀಫ್ ತಿನ್ನುವ ಉಸೇನ್ ಬೋಲ್ಟ್’ ಹೇಳಿಕೆ : ಯುಟರ್ನ್ ಹೊಡೆದ ದೆಹಲಿ ಬಿಜೆಪಿ ಸಂಸದ

ಈ ಸುದ್ದಿಯನ್ನು ಶೇರ್ ಮಾಡಿ

Bolt
ದೆಹಲಿ:ಆ,29-ಒಲಿಂಪಿಕ್ಸ್‌ನಲ್ಲಿ ಹೊಸ ಮೈಲಿಗಲ್ಲು ಸಾಧನೆ ಮಾಡಿದ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಬಡ ಕುಟುಂಬದ ಹುಟ್ಟಿ ತರಬೇತುದಾರ ಸಲಹೆಯಂತೆ ದಿನಕ್ಕೆ ಎರಡು ಬಾರಿ ಧನದ ಮಾಂಸ ಸೇವನೆಯಿಂದ ಒಲಿಂಪಿಕ್ಸ್‌ನಲ್ಲಿ 9 ಚಿನ್ನದ ಪದಕ ಗಲ್ಲುವುದ್ದಕ್ಕೆ ಸಾಧ್ಯವಾಯಿತು ಎಂದು ಭಾನುವಾರ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಸಂಸದ ಹಾಗೂ ದಲಿತ ನಾಯಕ ಉದ್ದೀತ್ ರಾಜ್ ಈಗ ಯೂಟರ್ನ್ ಹೊಡೆದಿದ್ದಾರೆ. ಬೋಲ್ಟ್ ಅವರ ಪರಿಶ್ರಮದಿಂದ ಒಲಿಂಪಿಕ್ಸ್‌ನಲ್ಲಿ ಇಂತಹ ಅದ್ಭುತ ಸಾದನೆ ಮಾಡಿದ್ದಕ್ಕೆ ಸಾಧ್ಯವಾತು ಎಂದು ಹೇಳಿದ್ದಾರೆ.

ಈ ಕುರಿತು ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ಯಾವತ್ತು ಈ ರೀತಿ ಹೇಳಿಕೆ ನೀಡಲ್ಲ. ಕ್ರೀಡಾಪಟುಗಳು ಇಚ್ಛೆಯಂತೆ ಏನೂ ಬೇಕಾದರೂ ತಿನ್ನಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ. ಅಥ್ಲೀಟ್‌ವೊಬ್ಬರು ದೇಶದಲ್ಲಿ ಕ್ರೀಡಾಪಟುಗಳಿಗೆ ಸುಸಜ್ಜಿತ ಸೌಲಭ್ಯಲ್ಲ ಎಂದು ಆಪಾದನೆ ಮಾಡಿದ್ದರು. ಪದಕ ಗೆಲುವುದಕ್ಕೆ ಸೌಲಭ್ಯ ಎಂಬ ಕಾರಣ ನೀಡುವುದು ಸರಿಯಲ್ಲ. ಬೋಲ್ಡ್ ಬಡವರನಾಗಿ ಅಪಾರ ಪರಿಶ್ರಮದಿಂದ ಒಲಿಂಪಿಕ್ಸ್‌ನಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಹಿಗಾಗಿ ಕ್ರೀಡಾಪಟುಗಳು ಬೋಲ್ಟ್‌ನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು ಎಂದು ಉದ್ದೀತ್ ರಾಜ್ ಸ್ಪಷ್ಟನೆ ನೀಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin