ಬೀಳುವ ಸ್ಥಿತಿಯಲ್ಲಿ ಬೃಹತ್ ಮರ

ಈ ಸುದ್ದಿಯನ್ನು ಶೇರ್ ಮಾಡಿ

channapatanaಚನ್ನಪಟ್ಟಣ, ಅ.26- ನಗರದ ಸಾರ್ವಜನಿಕ ಆಸ್ಪತ್ರೆಯ ಮುಂಬದಿಯಲ್ಲಿ ಬೆಳೆದಿರುವ ಬೃಹತ್ ಮರವೊಂದು ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದ್ದರೂ ಯಾರೂ ತಲೆಕೆಡಿಸಿಕೊಳ್ಳದೆ ಇರುವುದು ಮುಂದೊಂದು ದಿನ ಪಶ್ಚಾತ್ತಾಪಕ್ಕೆ ಕಾರಣವಾಗಿದೆ.ಆಸ್ಪತ್ರೆಯ ಮುಂಬದಿಯ ಗೋಡೆ ಬಳಿಯಲ್ಲಿಯೇ ಬೆಳೆದಿರುವ ಬೃಹತ್ ಕಾಡು ಜಾತಿಯ ಮರ ಬಹಳ ಎತ್ತರಕ್ಕೆ ಬೆಳೆದು ಬೃಹತ್ ನೆರಳು ನೀಡುತ್ತಿರುವುದು ಸಂತಸವಾದರೂ ಸಂತಸದ ಜೊತೆಯಲ್ಲಿಯೇ ಆತಂಕವನ್ನು ಸೃಷ್ಟಿಮಾಡಿರುವುದಂತೂ ವಾಸ್ತವವಾಗಿದೆ.

ಮರ ಬೆಳೆದಂತೆಲ್ಲಾ ಮುಂಬದಿಗೆ ವಾಲಿಕೊಂಡಿದೆ. ಅಲ್ಲದೆ ವಾಲಿಕೊಂಡಿರುವ ಕಡೆಯಲ್ಲಾ ರಂಬೆಗಳ ಗಾತ್ರ ವರ್ಷ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ. ಇದೇ ರೀತಿ ಮುಂದುವರಿಯುತ್ತಾ ಹೋದರೆ ಒಂದೇ ಕಡೆ ಹೆಚ್ಚು ಭಾರವಾಗಿ ಯಾವ ಸಂದರ್ಭದಲ್ಲಿ ಮರ ಬುಡದ ಸಮೇತ ಬೀಳುವುದೋ ಎಂಬುದು ತಿಳಿಯದಾಗಿದೆ.ಮರ ಬಿದ್ದು ಅನಾಹುತ ಸಂಭವಿಸುವುದರ ಜೊತೆಗೆ ಗೋಡೆಗೆ ಹೊಂದಿಕೊಂಡಿರುವ ಮರದ ಬುಡ ಮೇಲೆ ಬಂದರೆ ಆಸ್ಪತ್ರೆಯ ಗೋಡೆಗೆ ಹೆಚ್ಚು ಹಾನಿಯಾಗಲಿದ್ದು ಈ ಎಲ್ಲಾ ಅನಾಹುತಗಳು ಸಂಭವಿಸುವ ಮೊದಲೇ ಆಸ್ಪತ್ರೆಯ ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಂಡು ಮರಕ್ಕೆ ಸಂಪೂರ್ಣವಾಗಿ ಕೊಡಲಿ ಹಾಕದಿದ್ದರೆ ವಾಲಿರುವ ಬಾರಿಗಾತ್ರದ ರೆಂಬೆಗಳನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಬೇಕಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin