ಬುಕ್ ಮಾಡಿದ್ದು ಸ್ಮಾರ್ಟ್ ಫೋನ್, ಬಂದಿದ್ದು ಆಟಿಕೆ ಫೋನ್…!

ಈ ಸುದ್ದಿಯನ್ನು ಶೇರ್ ಮಾಡಿ

Smart-Phone--01

ಬೇಲೂರು,ಮೇ10– ಆನ್‍ಲೈನ್‍ನಲ್ಲಿ ಬುಕ್ ಮಾಡಿದ್ದ ಸ್ಕ್ರೀನ್‍ಟಚ್ ಮೊಬೈಲ್ ಬದಲಿಗೆ ಮಕ್ಕಳಾಡುವ ಆಟಿಕೆ ಮೊಬೈಲ್ ಕಳುಹಿಸಿ ಗ್ರಾಹಕರೊಬ್ಬರಿಗೆ ವಂಚಿಸಿರುವ ಘಟನೆ ಬೇಲೂರಿನಲ್ಲಿ ನಡೆದಿದೆ. ಬೇಲೂರು ಪಟ್ಟಣದ ತೀರ್ಥಪ್ರಸಾದ್ ಎಂಬುವರು ತಮ್ಮ ಮಡದಿಗೆ ಮೊಬೈಲ್ ಕೊಡಿಸುವ ಉದ್ದೇಶದಿಂದ ಫೇಸ್‍ಬುಕ್‍ನಲ್ಲಿನ ಶಾಪ್‍ಮ್ಯಾಕ್ಸ್ ಜಾಹಿರಾತಿನಲ್ಲಿ ಬರುತಿದ್ದ  ನೋಕಿಯ ಕಂಪನಿಯ 4500 ಬೆಲೆಯ ಸ್ಕ್ರೀನ್ ಟಚ್ ಮೊಬೈಲ್‍ನ್ನು 1299ರೂಗಳಿಗೆ ಆನ್‍ಲೈನ್ ಮೂಲಕ ಕ್ಯಾಶ್ ಅಂಡ್ ಡೆಲಿವರಿಗಾಗಿ ಬುಕ್ ಮಾಡಿದ್ದರು.  ಆದರೆ ಶಾಪ್‍ಮ್ಯಾಕ್ಸ್ ಕಂಪನಿಯವರು ಗ್ರಾಹಕ ತೀರ್ಥಪ್ರಸಾದ್‍ಗೆ ದೂರಾವಾಣಿ ಕರೆಮಾಡಿ ಮಂಗಳವಾರ ನೀವು ಬುಕ್ ಮಾಡಿರುವ ಪಾರ್ಸ್‍ಲ್ ಬರುತ್ತಿದೆ ಹಣ ಕೊಟ್ಟು ತೆಗೆದುಕೊಳ್ಳಿ ಎಂದು ತಿಳಿಸಿದ್ದರು.ಅದರಂತೆ ನಿನ್ನೆ ಬೇಲೂರಿಗೆ ಬಂದಿದ್ದ ಪಾರ್ಸಲ್ ತೆಗೆದು ಕೊಂಡು ಬಿಚ್ಚಿ ನೋಡಿದರೆ ಅದರಲ್ಲಿ ಗ್ರಾಹಕರು ಬುಕ್ ಮಾಡಿದ್ದ ಮೋಬೈಲ್ ಇರದೆ ಮಕ್ಕಳಾಡುವ ಮೊಬೈಲ್ ಇದ್ದದ್ದನ್ನು ಕಂಡು ಬೆಸ್ತು ಬಿದ್ದಿದ್ದಾರೆ.   ಈ ಬಗ್ಗೆ ಪಾರ್ಸಲ್ ತಂದಿದ್ದವರನ್ನು ಕೇಳಿದರೆ ನಮಗೂ ಇದಕ್ಕೂ ಸಂಬಂದವಿಲ್ಲ ಎಂದು ತಿಳಿಸಿ ಕೆಲಹೊತ್ತು ಮಾತಿಗೆ ಮಾತು ಬೆಳೆಸಿದ್ದಾರೆ. ವಿಶೇಷವೆಂದರೆ ಕಂಪನಿಯಿಂದ ಬಂದಿದ್ದ ಪಾರ್ಸಲ್ ಬಾಕ್ಸ್ ಮೇಲಿದ್ದ ದೂರಾವಾಣಿ ಸಂಖ್ಯೆಗೆ ಕರೆಮಾಡಿದರೆ ಆ ನಂಬರ್‍ನಿಂದ ಯಾವುದೆ ಉತ್ತರವಿರಲಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin