ಬುದ್ಧಿಮಾಂದ್ಯ ಬಾಲಕಿ ಮೇಲೆ ಆಟೋದಲ್ಲಿ ಅತ್ಯಾಚಾರವೆಸಗಿದ್ದ ಇಬ್ಬರ ಕಾಮುಕರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

arrested

ಮದ್ದೂರು, ಜು.20-ಬುದ್ಧಿಮಾಂದ್ಯ ಬಾಲಕಿಯನ್ನು ಆಟೋದಲ್ಲಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಕೆಸ್ತೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.  ಆತಗೂರಿನ ಯರಗನಹಳ್ಳಿ ಗ್ರಾಮದ ಸಂದೀಪ ಮತ್ತು ಪ್ರಮೋದ್ ಬಂಧಿತ ಆರೋಪಿಗಳು.ಜು.17 ರಂದು ರಾತ್ರಿ ಕೆಸ್ತೂರು ಬಸ್ ನಿಲ್ದಾಣದ ಸಮೀಪ 17 ವರ್ಷದ ಬುದ್ಧಿಮಾಂದ್ಯ ಬಾಲಕಿ ಓಡಾಡುತ್ತಿದ್ದಾಗ ಈ ಇಬ್ಬರು ಆಕೆಗೆ ತಿಂಡಿ ಕೊಡಿಸುವ ನೆಪದಲ್ಲಿ ಆಟೋದಲ್ಲಿ ಅಪಹರಿಸಿ ಯರಗನಹಳ್ಳಿ ಗ್ರಾಮದ ತನ್ನ ಮನೆಗೆ ಕರೆತಂದ ಪ್ರಮೋದ್ ಹಾಗೂ ಸಂದೀಪ ಈಕೆ ಮೇಲೆ ಅತ್ಯಾಚಾರ ನಡೆಸಿದ್ದರು.

ತದನಂತರ ಈ ಬಾಲಕಿಯನ್ನು ಅದೇ ಆಟೋದಲ್ಲಿ ಕರೆದುಕೊಂಡು ಮದ್ದೂರಮ್ಮ ದೇವಾಲಯದ ಆವರಣದ ಬಳಿ ಈಕೆಯನ್ನು ಬಿಟ್ಟು ಕೈಗೆ ಸ್ವಲ್ಪ ಹಣ ಕೊಟ್ಟು ಪರಾರಿಯಾಗಿದ್ದರು. ಅಂದು ತನ್ನ ಮನೆಗೆ ತೆರಳಿದ ಬಾಲಕಿ ನಡೆದ ಘಟನೆಯನ್ನು ತಾಯಿ ಬಳಿ ಹೇಳಿಕೊಂಡಿದ್ದಳು. ತಾಯಿ ಕೆಸ್ತೂರು ಠಾಣೆಗೆ ದೂರು ನೀಡಿದ್ದರು.

ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸಂತ್ರಸ್ತ ಬಾಲಕಿಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ ಆರೋಪಿಗಾಗಿ ಬಲೆ ಬೀಸಿದ್ದರು.  ರಾತ್ರಿ ಆರೋಪಿಗಳಿಬ್ಬರು ಮದ್ದೂರು ಬಸ್ ನಿಲ್ದಾಣದ ಬಳಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿ ನಗರದ ಜೆಎಂಎಫ್‍ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

Facebook Comments

Sri Raghav

Admin