ಬುದ್ಧಿ ಹೇಳಿದ್ದಕ್ಕೆ ತಂದೆಯನ್ನೇ ಕೊಂದ ಪಾಪಿ ಮಗ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾವೇರಿ,ಏ.8- ಬುದ್ಧಿ ಹೇಳಿದ ತಂದೆಯನ್ನೇ ಪಾಪಿ ಮಗ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಬಿಂಗಾಪುರ ಗ್ರಾಮದಲ್ಲಿ ನಡೆದಿದೆ.

ಬಿಂಗಾಪುರ ಗ್ರಾಮದ ನಿವಾಸಿ ಮುರಾರಿ ಡಾಂಗೆ(55) ಕೊಲೆಯಾದ ದುರ್ದೈವಿ. ಸಿದ್ದಪ್ಪ(35) ಕೊಲೆ ಮಾಡಿದ ಆರೋಪಿ. ಕ್ಷುಲಕ ಕಾರಣಕ್ಕೆ ಮನೆಯಲ್ಲಿ ಆಗಾಗ ಜಗಳವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ತಂದೆ ಮುರಾರಿ ಮಗ ಸಿದ್ದಪ್ಪನಿಗೆ ಬುದ್ಧಿ ಮಾತು ಹೇಳಿದ್ದರು.

ಆದರೆ ತಂದೆಯ ಬುದ್ಧಿ ಮಾತಿನಿಂದ ತನ್ನ ವರ್ತನೆ ತಿದ್ದಿಕೊಳ್ಳುವ ಬದಲು ಸಿದ್ದಪ್ಪ, ತಂದೆಯ ಮೇಲೆ ಕೋಪಗೊಂಡು ಕೈಗೆ ಸಿಕ್ಕ ಕಟ್ಟಿಗೆಯಿಂದ ಥಳಿಸಿ ಕೊಲೆಗೈದಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಸದ್ಯ ಆರೋಪಿ ಸಿದ್ದಪ್ಪನ ವಿರುದ್ಧ ಆಡೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರ ನಡೆಸುತ್ತಿದ್ದಾರೆ.

Facebook Comments

Sri Raghav

Admin