ಬುದ್ಧ ,ಬಸವ ಮತ್ತು ಅಂಬೇಡ್ಕರ್ ಅವರ ತತ್ವಾದರ್ಶಗಳು ಪ್ರಸ್ತುತ ಸಮಾಜಕ್ಕೆ ಅನಿವಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

dabaspete
ದಾಬಸ್‍ಪೇಟೆ, ಮೇ 19- ನಿರ್ಲಕ್ಷಕ್ಕೆ ಒಳಗಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳದ ಎಷ್ಟೋ ಸಮುದಾಯದ ಜನರ ದನಿಯಾಗಿ ನಿಂತವರು ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದು ಮೇಲಣಗವಿ ಮಠದ ಮಲಯಶಾಂತಮುಣಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಶಿವಗಂಗೆಯಲ್ಲಿ ದಲಿತ ಸಂಘರ್ಷ ಸಮಿತಿ ಡಾ.ಬಿ.ಆರ್.ಅಂಬೇಡ್ಕರ್ ಜಂಯತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಸಮಾನತೆಗಾಗಿ ಕಹಳೆ ಊದಿದ ಬಸವಣ್ಣಜತಿ ಪದ್ದತಿ, ವರ್ಗ, ವರ್ಣ, ಸ್ತ್ರೀ ಪುರುಷ ಎಂಬ ಭೇದ-ಭಾವವನ್ನು ನಿರ್ಮೂಲನೆ ಆಗಬೇಕೆಂದು ಹೋರಾಟ ಮಾಡಿದವರು ಎಂದರು.
ಶಾಸಕ ಶ್ರೀನಿವಾಸ್ ಮಾತನಾಡಿ, ದಲಿತರ ದನಿಯಾದ ಬುದ್ಧ ಬಸವ ಮತ್ತು ಅಂಬೇಡ್ಕರ್ ಅವರ ತತ್ವಾದರ್ಶಗಳು ಪ್ರಸ್ತುತ ಸಮಾಜಕ್ಕೆ ಅನಿವಾರ್ಯವಾಗಿ ಎಂದರು.ಕಾಮಿಡಿಕಿಲಾಡಿಯ ಲೋಕೇಶ್, ಲೀಟ್ಲುಚಾಂಪ್ಸನ ವಸತಂತಸ ಕುಮಾರ್, ಮುಖಂಡರಾದ ಹೋಂಬಯ್ಯ, ನರಸಿಂಹಮೂರ್ತಿ ಹೋನ್ನಗಂಗಶೆಟ್ಟಿ , ಎಸ್.ಟಿ.ಸಿದ್ದರಾಜು, ತೀರ್ಥಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin