ಬೂದಿ ಮುಚ್ಚಿದ ಕೆಂಡದಂತಿದೆ ಮಂಡ್ಯ : ಪ್ರತಿಭಟನೆಗೆ ತಮಿಳಿಗರ ಸಾಥ್

ಈ ಸುದ್ದಿಯನ್ನು ಶೇರ್ ಮಾಡಿ

Mandya-a

ಮಂಡ್ಯ, ಸೆ.13– ಕಾವೇರಿ ವಿವಾದ ಸೃಷ್ಟಿಸಿ ರಾಜ್ಯದಲ್ಲಿ ಶಾಂತಿ ಕದಡಲು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರೇ ಕಾರಣ ಎಂದು ಇಲ್ಲಿನ ತಮಿಳು ಸಮುದಾಯದ ನೂರಾರು ಮಂದಿ ಬೆಂಗಳೂರು-ಮೈಸೂರು ರಸ್ತೆತಡೆದು ಪ್ರತಿಭಟನೆ ನಡೆಸಿದ್ದಾರೆ. ಮದ್ದೂರು, ಮಂಡ್ಯ, ಮಳವಳ್ಳಿ ಸೇರಿದಂತೆ ಜಿಲ್ಲೆಯ ಹಲವೆಡೆ ಇಂದೂ ಕೂಡ ಪ್ರತಿಭಟನೆಗಳು ಮುಂದುವರಿದಿದ್ದು, ಮತ್ತೆ ಸುಪ್ರೀಂಕೋರ್ಟ್ ಹೆಚ್ಚುವರಿ ನೀರು ಬಿಡುವಂತೆ ಆದೇಶ ನೀಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಳೆ ಬೂದನೂರು ಗ್ರಾಮದ ಬಳಿ ಹೆದ್ದಾರಿ ತಡೆದು ಜಯಲಲಿತಾ ವಿರುದ್ಧ ಘೋಷಣೆ ಕೂಗುತ್ತಿದ್ದು, ಇನ್ನು ಮದ್ದೂರಿನ ಮಾದರಹಳ್ಳಿ, ಕೆಎಂ ದೊಡ್ಡಿ ರಸ್ತೆಯಲ್ಲೂ ಕೂಡ ತಮಿಳು ಭಾಷಿಗರು ಕನ್ನಡ ಸಂಘಟನೆಗಳ ಜತೆಗೂಡಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.
ಇದಲ್ಲದೆ ತಮಿಳುನಾಡಿನ ವಿವಿಧೆಡೆ ಅಮಾಯಕ ಕನ್ನಡಿಗರ ಮೇಲೆ ನಡೆದಿರುವ ದೌರ್ಜನ್ಯ ಕೂಡ ಖಂಡಿಸಿದ್ದಾರೆ. ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ ಬೆಂಕಿ ಹಚ್ಚಿ ಜಯಲಲಿತಾ ತಣ್ಣಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಅಘೋಷಿತ ಬಂದ್ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನಗಳ ಓಡಾಟವೂ ಕೂಡ ವಿರಳವಾಗಿದ್ದು, ಸಾರಿಗೆ ಬಸ್‍ಗಳು ಕೂಡ ಬಂದ್ ಆಗಿವೆ. ತಮಿಳು ಭಾಷಿಗರು ವಾಸಿಸುತ್ತಿರುವ ಪ್ರದೇಶಗಳಿಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.  ಕೆಆರ್‍ಎಸ್ ಜಲಾಶಯದ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಸೆ.17ರ ವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದಲ್ಲದೆ, ಸೆ.19ರ ವರೆಗೆ ಮದ್ಯ ಮಾರಾಟ ಕೂಡ ನಿಷೇಧಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin