ಬೃಹತ್ ಕಸದ ಗುಡ್ಡ ಕುಸಿದು 65 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

65-Kiled
ಅಡಿಸ್ ಅಬಾಬಾ (ಇಥಿಯೋಪಿಯಾ), ಮಾ.14-ಬೃಹತ್ ಕಸದ ಗುಡ್ಡ (ಗುಡ್ಡೆ) ಕುಸಿದು 65 ಮಂದಿ ಮೃತಪಟ್ಟು, ಅನೇಕ ಮನೆಗಳು ನೆಲಸಮವಾದ ಘಟನೆ ಇಥಿಯೋಪಿಯಾ ರಾಜಧಾನಿ ಅಡಿಸ್ ಅಬಾಬಾದಲ್ಲಿ ಸಂಭವಿಸಿದೆ. ರಾಜಧಾನಿ ಹೊರವಲಯದ ಕೋಶೆ ಎಂಬಲ್ಲಿ ನಿನ್ನೆ ದೇಶದ ಅತಿದೊಡ್ಡ ಕಸದ ರಾಶಿಯ ಒಂದು ಭಾಗ ಕುಸಿದು ಬಿತ್ತು. ಈ ದುರಂತದಲ್ಲಿ ಮಹಿಳೆಯರು, ಪುರುಷರು ಮಕ್ಕಳು ಸೇರಿದಂತೆ ಒಟ್ಟು  65 ಮಂದಿ  ಪ್ರಾಣ ಕಳೆದುಕೊಂಡರು. ಮೃತರಲ್ಲಿ ಮಕ್ಕಳೂ ಸೇರಿದ್ದಾರೆ ಎಂದು ಸಿಟಿ ಕಮ್ಯೂನಿಕೇಷನ್ಸ್ ಬ್ಯೂರೋ ಮುಖ್ಯಸ್ಥೆ ಡಗ್ಮವಿಟ್ ಮೋಗನ್ ತಿಳಿಸಿದ್ದಾರೆ.

65-Kiled-1

ಈ ದುರ್ಘಟನೆಯಲ್ಲಿ ಅನೇಕ ಮನೆಗಳು ನೆಲಸಮವಾಗಿದ್ದು, ಇನ್ನೂ ಕೆಲವರು ಕಸದ ರಾಶಿಯೊಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 74 ಎಕರೆ ಪ್ರದೇಶದಲ್ಲಿರುವ ಈ ಕಸದ ಗುಡ್ಡೆಯ ಜನರು ಸಮೀಪ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಜೀವನೋಪಾಯಕ್ಕಾಗಿ ಕಸ ಸಂಗ್ರಹಿಸುವ ಮತ್ತು ವಿಲೇವಾರಿ ನೌಕರಿ ಮಾಡುತ್ತಿದ್ದ ಮಂದಿ ಈ ಅನಾಹುತದಲ್ಲಿ ಮೃತಪಟ್ಟಿದ್ದಾರೆ.   ಕೋಶೆ ತ್ಯಾಜ್ಯ ರಾಶಿಯಲ್ಲಿ ಸುಮಾರು 42 ವರ್ಷಗಳಿಂದ 40 ಲಕ್ಷ ಜನಸಂಖ್ಯೆಯ ಅಡಿಸ್ ಅಬಾಬಾ ನಗರದ ತ್ಯಾಜ್ಯವನ್ನು ಇಲ್ಲಿ ಸುರಿಯಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

65-Kiled-5

65-Kiled-4 

Facebook Comments

Sri Raghav

Admin