ಬೃಹತ್ ಮೊತ್ತದತ್ತ ಆಂಗ್ಲರು

ಈ ಸುದ್ದಿಯನ್ನು ಶೇರ್ ಮಾಡಿ

England-01

ಚೆನ್ನೈ,ಡಿ.17-ಸಾಂಘಿಕ ಬ್ಯಾಟಿಂಗ್ ಬಲದ ನೆರವಿನಿಂದ ಪ್ರವಾಸಿ ತಂಡ ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ಭಾರತದ ತಂಡದ ವಿರುದ್ಧ ಬೃಹತ್ ಇನ್ನಿಂಗ್ಸ್‍ನತ್ತ ಮುಖ ಮಾಡಿದೆ.
ಇಲ್ಲಿನ ಚೆಪಕ್ ಎಂ.ಎ ಚಿದಂಬರಂ ಮೈದಾನದಲ್ಲಿ ಇಂಗ್ಲೆಂಡ್ ಕೆಳ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳ ಆಟದಿಂದ ಸವಾಲಿನ ಮೊತ್ತದತ್ತ ಸಾಗಿದೆ. 4 ವಿಕೆಟ್ ನಷ್ಟಕ್ಕೆ 284 ರನ್‍ಗಳಿಂದ ದಿನದಾಟ ಆರಂಭಿಸಿದ ಆಂಗ್ಲ ತಂಡದ ವÉೂಹಿನ್ ಅಲಿ ಹಾಗೂ ಬೆನ್ ಸ್ಟ್ರೋಕ್ಸ್ ಜೋಡಿಗೆ ಆರಂಭದಲ್ಲೇ ಅಶ್ವಿನ್ ಶಾಕ್ ನೀಡಿದರು.  ಟೂರ್ನಿಯಲ್ಲಿ ತಂಡಕ್ಕೆ ಆಧಾರವಾಗಿದ್ದ ಬೆನ್‍ಸ್ಟ್ರೋಕ್ಸ್ ಕೇವಲ 6 ರನ್ ಗಳಿಸಿ ಅಶ್ವಿನ್ ಬೌಲಿಂಗ್‍ನಲ್ಲಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ನಿನ್ನೆ ಸೊಗಸಾದ ಬ್ಯಾಟಿಂಗ್ ಪ್ರದರ್ಶಿಸಿ ಟೂರ್ನಿಯಲ್ಲಿ 2ನೇ ಶತಕ ಸಿಡಿಸಿದ ಅಲಿ ಇಂದು ಕೂಡ ಸ್ವಲ್ಪ ಹೊತ್ತು ಭಾರತದ ಬೌಲಿಂಗ್ ದಾಳಿಯನ್ನು ಎದುರಿಸಿ ತಂಡಕ್ಕೆ ಬೆನ್ನೆಲುಬಾಗಿ ನಿಂತರು.
ಸ್ಟ್ರೋಕ್ಸ್ ಔಟಾದ ಬಳಿಕ ಕ್ರೀಸ್‍ಗೆ ಆಗಮಿಸಿದ ಬಟ್ಲರ್ 5 ರನ್ ಗಳಿಸಿ ನಿರಾಸೆ ಮೂಡಿಸಿದರು. ತಂಡವು ಮಧ್ಯಮ ಕ್ರಮಾಂಕದ ಇಬ್ಬರ ಪ್ರಮುಖ ವಿಕೆಟ್‍ಗಳನ್ನು 300 ಗಡಿಯಲ್ಲಿ ಕಳೆದುಕೊಂಡಿತು. ಈ ವೇಳೆ ತಂಡಕ್ಕೆ ಅಲಿ ಮತ್ತೊಮ್ಮೆ ನೆರವಾದರು.  120 ರನ್‍ನಿಂದ ಆಟ ಆರಂಭಿಸಿದ ಅಲಿ ಭಾರತ ಬೌಲಿಂಗ್ ಸವಾಲನ್ನು ಎದುರಿಸಿ 146 ರನ್ ಗಳಿಸಿದಾಗ ಉಮೇಶ್ ಯಾದವ್ ಬೌಲಿಂಗ್‍ನಲ್ಲಿ ಜಡೆಜ ಅವರಿಗೆ ಕ್ಯಾಚ್ ನೀಡಿದಾಗ ಭಾರತ ನಿಟ್ಟುಸಿರು ಬಿಟ್ಟಿತ್ತು.  ಅಮೋಘವಾಗಿ ಆಟವಾಡಿದ ಮೊಹಿನ್ ಅಲಿ 146 ರನ್, 262 ಎಸೆತ, 13 ಬೌಂಡರಿ, 1 ಸಿಕ್ಸರ್ ಸಿಡಿಸಿದರು.

ವಿರಾಮಕ್ಕೂ ಮುನ್ನ ತಂಡದ ಮೊತ್ತ 321 ರನ್‍ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಲಿಯಾಂ ಡಾನ್ಸನ್ ಹಾಗೂ ಅದಿಲ್ ರಷೀದ್ ಜೋಡಿಯು 8ನೆ ವಿಕೆಟ್ ಜೊತೆಯಾಟದಲ್ಲಿ ರಕ್ಷಣಾತ್ಮಕ ಆಟವಾಡಿ ತಂಡಕ್ಕೆ ನೆರವಾದರು.  ಡಾನ್ಸನ್ 38 ಹಾಗೂ ರಶೀದ್ 27 ರನ್ ಗಳಿಸಿ ಆಟವಾಡುತ್ತಿದ್ದಾರೆ. ಪತ್ರಿಕೆ ಮುದ್ರಣವಾಗುವ ಸಮಯದಲ್ಲಿ ಆಂಗ್ಲರು 7 ವಿಕೆಟ್ ಕಳೆದುಕೊಂಡು 383 ರನ್ ಪ್ರೇರಿಸಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin