ಬೆಂಕಿಬಿದ್ದು ಭಸ್ಮವಾದ ಗೋಶಾಲೆಗೆ ಹುಲ್ಲು ಸಾಗಿಸುತ್ತಿದ್ದ ಲಾರಿ
ಮಧುಗಿರಿ, ಏ.22- ಗೋ ಶಾಲೆಗೆ ಹುಲ್ಲನ್ನು ಸಾಗಾಣೆ ಮಾಡುತ್ತಿದ್ದ ಲಾರಿಗೆ ಬೆಂಕಿ ಬಿದ್ದ ಪರಿಣಾಮ ಹುಲ್ಲಿನ ಸಮೇತ ಲಾರಿಯೂ ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ.ತಾಲ್ಲೂಕಿನ ಮಿಡಿಗೇಶಿ ಗೋ ಶಾಲೆಗೆ ಒಣಗಿದ ಭತ್ತದ ಹುಲ್ಲನ್ನು ಸಾಗಿಸುತ್ತಿದ್ದ ಲಾರಿಗೆ ಹೊಸಕೆರೆ ಬಳಿ ಜೊತುಬಿದ್ದ ವಿದ್ಯುತ್ ತಂತಿ ತಗುಲಿ ಬೆಂಕಿಯ ಕಿಡಿ ಹೊತ್ತಿದ್ದು, ಇದನ್ನು ಗಮನಿಸಿದ ಲಾರಿ ಚಾಲಕನು ಸಮಯಪ್ರಜ್ಞೆಯಿಂದ ಮೆರೆದು ಲಾರಿಯನ್ನು ಊರಿನ ಹೊರಗೆ ತಂದು ನಿಲ್ಲಿಸಿದ. ಇದರಿಂದ ಆಗಬಹುದಾದ ಅಪಾರ ನಷ್ಟವನ್ನು ತಪ್ಪಿಸಿದ್ದಾನೆ.
ಬೇಸಿಗೆಯಾದ್ದರಿಂದ ಹೆಚ್ಚು ಉಷ್ಣಾಂಶವಿದ್ದ ಕಾರಣ ಒಣಗಿದ್ದ ಹುಲ್ಲು ಬೇಗನೆ ಬೆಂಕಿಗೆ ಸ್ಪಂದಿಸಿದ ಕಾರಣ ಬೇಗ ಹೆಚ್ಚು ಹುಲ್ಲು ತುಂಬಿದ್ದರಿಂದ ತಂತಿಗೆ ತಗುಲಿದೆ ಎನ್ನಲಾಗಿದ್ದು, ಮಧುಗಿರಿ ಹಾಗೂ ಶಿರಾದ ಅಗ್ನಿಶಾಮಕದಳ ಬೇಗ ಬಂದರೂ ಬೆಂಕಿ ನಂದಿಸಲು ಸಾಧ್ಯವಾಗದ ಕಾರಣ ಹುಲ್ಲು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಆದರೆ ಲಾರಿಗೆ ಶೇ. 30 ರಷ್ಟು ಹಾನಿಯಾಗಿದ್ದು, ಹೆಚ್ಚಿನ ಹಾನಿ ತಪ್ಪಿದ್ದು, ಸಮ ಪ್ರಮಾಣದ ಹುಲ್ಲು ಇದ್ದಿದ್ದರೆ ಈ ಅವಘಡ ನಡೆಯುತ್ತಿರಲಿಲ್ಲ ಎನ್ನಲಾಗಿದೆ. ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀನಿವಾಸ್, ಮಧುಗಿರಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಲಿಂಗಯ್ಯ, ಕಾಂತರಾಜು, ಹನುಮಂತರಾಯಪ್ಪ, ಸತೀಶ್, ಹನುಮಂತಯ್ಯ, ರಾಘವೇಂದ್ರ, ಸಿರಾ ಅಗ್ನಿಶಾಮಕದಳದ ಚಂದ್ರು, ಮಾರುತಿ, ಗೃಹರಕ್ಷಕದಳದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS