ಬೆಂಕಿಯಿಲ್ಲದೆ ಖಾದ್ಯ ತಯಾರಿಸಿ ಗಮನ ಸೆಳೆದ ಮಹಿಳೆಯರು

ಈ ಸುದ್ದಿಯನ್ನು ಶೇರ್ ಮಾಡಿ

ಬೇಲೂರು, ಜ.2- ಬೆಂಕಿಯ ಸಹಾಯವಿಲ್ಲದೆ ಬಗೆ ಬಗೆಯ ತಿಂಡಿ ತಿನಸುಗಳನ್ನು ಮಾಡುವ ಸ್ಪರ್ಧೆಯಲ್ಲಿ ಪಟ್ಟಣದ ಗೃಹಣಿಯರು ಉತ್ಸಾಹದಿಂದ ಭಾಗವಹಿಸಿ ಸ್ಥಳದಲ್ಲೇ ಖಾದ್ಯ ತಯಾರು ಮಾಡಿ ಅಚ್ಚರಿ ಮೂಡಿಸಿದರು.ಸಾಮಾನ್ಯವಾಗಿ ಬೆಂಕಿಯ ಸಹಾಯವಿಲ್ಲದೆ ತಿಂಡಿ ತಿನಸುಗಳನ್ನು ತಯಾರು ಮಾಡುವುದು ಕಷ್ಟದ ಮಾತು. ಆದರೆ ಇದಕ್ಕೆ ಅಪವಾದ ಎಂಬಂತೆ ಪಟ್ಟಣದ ಚನ್ನಕೇಶವ ದೇವಾಲಯದ ರಸ್ತೆಯಲ್ಲಿರುವ ಲರ್ನಿಂಗ್ ಶಾಲೆಯಲ್ಲಿ ಪೋಷಕರಿಗಾಗಿ ಏರ್ಪಡಿಸಿದ್ದ ಬೆಂಕಿ ಇಲ್ಲದೆ ತಿಂಡಿ ತಿನಿಸುಗಳ ಸ್ಪರ್ಧೆ ಕಾರ್ಯಕ್ರಮದಲ್ಲಿ ಬಗೆ ಬಗೆಯ ತಿಂಡಿಗಳನ್ನು ತಯಾರಿಸಿದರು. ಅಲ್ಲದೆ ವಿವಿದ ಕಾಳುಗಳಿಂದ ಮಾಡಿದ ಕೋಸಂಬರಿ, ಸಲಾಡ್, ಫ್ರೂಟ್ ಸಲಾಡ್, ಮಿಲ್ಕ್ ಶೇಕ್, ಬೇಲ್ ನಂತಹ ತಿಂಡಿಗಳನ್ನು ಮಾಡಿದ್ದರು. ಮತ್ತೆ ಕೆಲವರು ರಸ್ಕ್ ಮತ್ತು ಬಿಸ್ಕತ್ ಬಳಸಿ ಅದರಿಂದ ಉಂಡೆಗಳನ್ನು ತಯಾರು ಮಾಡಿದ್ದರು. ಇನ್ನೂ ಕೆಲವರು ರುಚಿಯಾದ ಪಾನೀಯಗಳನ್ನು ಮಾಡಿ ನೆರೆದಿದ್ದವರ ಗಮನ ಸೆಳೆದರು.

ಈ ಸಂದರ್ಭದಲ್ಲಿ ತೀರ್ಪುಗಾರರಾಗಿ ಆಗಮಿಸಿದ್ದ ಗೃಹಿಣಿ ತೇಜಸ್ವಿನಿ ಮಾತನಾಡಿ, ಬಹುಮಾನ ಬರುತ್ತೊ ಬಿಡುತ್ತೊ ಅದನ್ನು ಲೆಕ್ಕಿಸದೆ ಪೋಷಕರು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದೆ. ನಾವುಗಳು ತಿಂಡಿಯನ್ನು ಮಾಡುವುದಷ್ಟೇ ಅಲ್ಲ, ಅದನ್ನು ಉಣ ಬಡಿಸುವ ರೀತಿ, ನಮ್ಮ ಮಾತು ಹಾಗೂ ವಿವರಿಸುವ ರೀತಿ ಮತ್ತು ಕಡಿಮೆ ವಸ್ತುಗಳನ್ನು ಬಳಸಿ ರುಚಿಯಾದ ತಿಂಡಿಗಳನ್ನು ಮಾಡುವುದು ಮುಖ್ಯ ಎಂದರು.ಹೆಚ್ಚು ಮಹಿಳೆಯರು ಕೋಸಂಬರಿಯನ್ನು ಮಾಡಿದ್ದಾರೆ. ಬೆಂಕಿಯ ಸಹಾಯವಿಲ್ಲದೆ ಇನ್ನೂ ಹೆಚ್ಚು ಖಾದ್ಯಗಳನ್ನು ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎ.ಬಿ ಪ್ರಕಾಶ್, ಕರವೇ ಉಪಾಧ್ಯಕ್ಷ ರಾಘವೇಂದ್ರಹೊಳ್ಳ, ಲರ್ನಿಂಗ್ ಟ್ರೀ ಶಾಲೆಯ ಕಾರ್ಯದರ್ಶಿ ರಾಕೇಶ್ ಹಾಗೂ ಶಿಕ್ಷಕ ವೃಂದದವರು ಇದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin