ಬೆಂಕಿ ದುರಂತ: ಲಕ್ಷಾಂತರ ಮೌಲ್ಯದ  ಮರದ ಮುಟ್ಟು ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಿರಿಯೂರು,ಅ.21-ಇಂದು ಬೆಳಗ್ಗೆ ಇಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಪೀಠೋಪಕರಣಗಳನ್ನು ತಯಾರಿಸಲು ಸಂಗ್ರಹಿಸಿದ್ದ ಲಕ್ಷಾಂತರ ರೂ. ಮೌಲ್ಯದ ಬೆಲೆ ಬಾಳುವ ಮರ ಸುಟ್ಟು ಭಸ್ಮವಾಗಿದೆ. ಹಿರಿಯೂರು ಪಟ್ಟಣದಲ್ಲಿ ಪಟೇಲ್ ಎಂಬುವರು ಮರದ ಪೀಠೋಪಕರಣಗಳನ್ನು ತಯಾರಿಸುವ ಕಾರ್ಖಾನೆ ನಡೆಸುತ್ತಿದ್ದು , ಕುರ್ಚಿ, ಮೇಜು, ಮಂಚ ಇತ್ಯಾದಿ ಪೀಠೋಪಕರಣಗಳ ತಯಾರಿಗಾಗಿ ಭಾರೀ ಪ್ರಮಾಣದ ಮರದ ಮುಟ್ಟುಗಳನ್ನು  ಸಂಗ್ರಹಿಸಿದ್ದರು. ಇಂದು ಬೆಳಗ್ಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಈ ದುರಂತ ಸಂಭವಿಸಿದ್ದು ,  ಹಿರಿಯೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ ಭಾರೀ ಪ್ರಮಾಣದ ಮರ ಸುಟ್ಟು ನಾಶವಾಗಿದೆ.

Facebook Comments

Sri Raghav

Admin