ಅರಣ್ಯರಕ್ಷಕ ಮುರಿಗೆಪ್ಪ ಕುಟುಂಬಕ್ಕೆ 29ಲಕ್ಷ ರೂ. ಪರಿಹಾರದ ಚೆಕ್ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

Aranya-Rakshaka--01

ಬೆಂಗಳೂರು, ಮೇ 30- ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ವಲಯದಲ್ಲಿ ಬಿದ್ದ ಬೆಂಕಿ ನಂದಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಅರಣ್ಯ ರಕ್ಷಕ ಮುರಿಗೆಪ್ಪ ತಮ್ಮಗೋಳ್ ಅವರ ಕುಟುಂಬದವರಿಗೆ 29ಲಕ್ಷ ರೂ. ಪರಿಹಾರದ ಚೆಕನ್ನು ಅರಣ್ಯ ಸಚಿವ ರಮಾನಾಥರೈ ವಿತರಿಸಿದರು. ಬಂಡೀಪುರ ಹುಲಿ ಸಂರಕ್ಷಿತ ಪ್ರತಿಷ್ಠಾನ ನಿಧಿಯಿಂದ 25 ಲಕ್ಷ, ಐಎಫ್‍ಎಸ್ ಅಧಿಕಾರಿಗಳಿಂದ 4 ಲಕ್ಷ ಸೇರಿದಂತೆ ಒಟ್ಟು 29ಲಕ್ಷ ಹಾಗೂ ವಸತಿ ವಿಹಾರ ಧಾಮ ಸಂಸ್ಥೆ ವತಿಯಿಂದ 2 ಲಕ್ಷ ರೂ.ಗಳ ಚೆಕ್ಕನ್ನು ಮೃತನ ತಾಯಿಗೆ ನೀಡಲಾಯಿತು.ಇತ್ತೀಚೆಗೆ ಬನ್ನೇರುಘಟ್ಟ ಅರಣ್ಯಪ್ರದೇಶದಲ್ಲಿ ಕಾಡಾನೆ ದಾಳಿಯಿಂದ ಸಿಆರ್‍ಪಿಎಫ್ ಯೋಧರಾದ ದಕ್ಷಿಣಮೂರ್ತಿ ಹಾಗೂ ಕುಟ್ಟಪ್ಪಲಮಾಣಿ ಎಂಬುವರು ಮೃತರಾಗಿದ್ದು, ಅವರ ಕುಟುಂಬದವರಿಗೆ 5ಲಕ್ಷ ರೂ. ಪರಿಹಾರ ವಿತರಿಸಲಾಯಿತು. ನಂತರ ಮಾತನಾಡಿದ ಸಚಿವ ರಮಾನಾಥರೈ, ಬೆಂಕಿಯಿಂದ ಕಾಡು ನಾಶವಾಗುವುದನ್ನು ತಪ್ಪಿಸಲು ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆ ಸಹಯೋಗದಲ್ಲಿ ಬೆಂಕಿ ನಂದಿಸುವ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಅರಣ್ಯಗಳಿಗೆ ಬೆಂಕಿ ಬೀಳದಂತೆ ಶಾಶ್ವತ ಪರಿಹಾರ ಕಲ್ಪಿಸುವ ಚಿಂತನೆ ನಡೆದಿದೆ ಎಂದು ಅವರು ಹೇಳಿದರು.

ಅರಣ್ಯ ಇಲಾಖೆ ವತಿಯಿಂದ 6 ಕೋಟಿ ಸಸಿಗಳನ್ನು ನೆಡಲು ನಿರ್ಧರಿಸಲಾಗಿದೆ ಎಂದ ಸಚಿವರು, ದೇಶದಲ್ಲೇ ಅತಿ ಹೆಚ್ಚು ಆನೆಗಳಿರುವ ಕಾಡುಗಳು ನಮ್ಮ ಕರ್ನಾಟಕದಲ್ಲಿದ್ದು, ಆನೆ ಮತ್ತು ಮಾನವರ ನಡುವೆ ಸಂಘರ್ಷ ಹೆಚ್ಚಾಗುತ್ತಿದೆ. ಆನೆಗಳನ್ನು ರಕ್ಷಿಸಲು ರೈಲ್ವೆ ಕಂಬಿಯ ಬೇಲಿ, ಕಂದಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಬಂಡೀಪುರ, ನಾಗರಹೊಳೆ, ಬನ್ನೇರುಘಟ್ಟ ಅರಣ್ಯ ವಲಯದಲ್ಲಿ ಈ ಯೋಜನೆ ಜಾರಿಗೊಳಿಸುತ್ತಿದ್ದು, ಅದು ಯಶಸ್ವಿಯಾದರೆ ಎಲ್ಲ ಕಾಡುಗಳಲ್ಲಿ ಜಾರಿ ಮಾಡಲಾಗುವುದು ಎಂದರು.

 

Facebook Comments

Sri Raghav

Admin