ಬೆಂಗಳೂರಲ್ಲಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Modi-bangalore--02

ಬೆಂಗಳೂರು, ಅ.29- ಕರ್ನಾಟಕದ ಜನತೆ ಅವಧಿ ಮುನ್ನವೇ ವಿಧಾನಸಭೆ ಚುನಾವಣೆಗೆ ಕಾತುರರಾಗಿದ್ದು, ಈ ಬಾರಿ ಅಭಿವೃದ್ಧಿ ಕೆಲಸ ಮಾಡುವ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ. ಎಚ್‍ಎಎಲ್ ವಿಮಾನ ನಿಲ್ದಾಣದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಜನತೆ ಚುನಾವಣೆ ಬರುವರೆಗೂ ಕಾಯಲು ಸಿದ್ದರಿಲ್ಲ. ಈಗಾಗಲೇ ಚುನಾವಣೆಯ ಜಪ ಮಾಡುತ್ತಿದ್ದಾರೆ ಎನ್ನುವ ಮೂಲಕ ವಿಧಾನಸಭೆ ಚುನಾವಣೆಗೆ ಸಿದ್ದರಾಗಿ ಎಂದು ಪರೋಕ್ಷವಾಗಿ ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಿದರು.
ವಿಕಾಸ ಯಾತ್ರೆಯೊಂದಿಗೆ ರಾಜ್ಯದ ಜನರು ಬೆರೆಯಲು ಸಿದ್ದವಾಗಿದ್ದು ಕರ್ನಾಟಕ ವಿಕಾಸ ಯಾತ್ರೆಯ ಮುಖ್ಯ ದ್ವಾರವಾಗಿದೆ. ಇಲ್ಲಿನ ಜನತೆ ಅಭಿವೃದ್ದಿ ಬಯಸುತ್ತಾರೆ. ಮುಂಬರುವ ವಿದಾನಸಭೆ ಚುನಾವಣೆಯಲ್ಲಿ ಅಭಿವೃದ್ದಿಪರ ಇರುವ ಪಕ್ಷವನ್ನು ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ:

ಇನ್ನು ತಮ್ಮ 10 ನಿಮಿಷಗಳ ಭಾಷಣದಲ್ಲಿ ನರೇಂದ್ರಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯುವುದನ್ನು ನಿಲ್ಲಿಸಿಲ್ಲ. ಶನಿವಾರವಷ್ಟೇ ನವದೆಹಲಿಯಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಕಾಶ್ಮೀರಕ್ಕೆ ಸ್ವಾಯತೆತ್ತೆ ಬೇಕು ಎಂದು ಹೇಳಿದ್ದರು. ಇದನ್ನು ಕಟುವಾಗಿ ಟೀಕಿಸಿದ ಮೋದಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಈಗ ಕಾಶ್ಮೀರಕ್ಕೆ ಸ್ವಾಯತತ್ತೆ ಬಗ್ಗೆ ಮಾತನಾಡುತ್ತದೆ. ಇದಕ್ಕಿಂತ ನಾಚಿನಗೇಡಿನ ಸಂಗತಿ ಬೇರೆ ಇದೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಯಾವತ್ತು ದೇಶದ ಸುಧಾರಣೆಯನ್ನು ಮಾಡಲಿಲ್ಲ.ಕಡೆ ಪಕ್ಷ ಮಾಡುವವರನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ. ದೇಶದ ಜನತೆ ಆ ಪಕ್ಷದ ಬಗ್ಗೆ ಯಾವುದೇ ಭರವಸೆಯನ್ನು ಇಟ್ಟುಕೊಂಡಿಲ್ಲ. ಸಾಲು ಸಾಲು ಚುನಾವಣೆಯ ಸೋಲು ಕಂಡಿದ್ದರೂ ಇನ್ನು ಎಚ್ಚೆತ್ತುಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ದೇಶಕ್ಕಾಗಿ ತ್ಯಾಗಗೈದವರ ಬಗ್ಗೆ ರಾಜಕೀಯ ಮಾಡುವುದು ಸರಿಯಲ್ಲ. ಅಂಥವರಿಂದಲೇ ದೇಶದ ಅಭಿವೃದ್ದಿ ಸಾಧ್ಯ ಎಂದ ಅವರು, ಭಾರತ ಡೊಕ್ಲಾಮ್‍ನಲ್ಲಿ ಪ್ರದರ್ಶಿಸಿದ ಶಿಸ್ತು-ಸಂಯಮವನ್ನು ವಿಶ್ವವೇ ನೋಡಿದೆ. ಕಾಂಗ್ರೆಸ್ ಜನರಿಂದ ದೂರವಾಗಿದ್ದು , ಅಹಂಕಾರವನ್ನು ತಲೆ ಮೇಲೆ ಹೊತ್ತು ಸಾಗುತ್ತಿದೆ. ಸೋಲಿನ ಮೇಲೆ ಸೋಲು ಆಗುತ್ತಿದ್ದರೂ ಕಾಂಗ್ರೆಸ್ ಪಾಠ ಕಲಿಯುತ್ತಿಲ್ಲ ಎಂದು ಟೀಕಿಸಿದರು.

ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ವಿರುದ್ದ ವಾಗ್ದಾಳಿ ನಡೆಸಿದರು. ರಾಷ್ಟ್ರಕ್ಕೆ ಕಾಂಗ್ರೆಸ್‍ನ ಕೊಡುಗೆಯೇನು ಎಂದು ಪ್ರಶ್ನಿಸಿದ ಅವರು, ನಿನ್ನೆಯವರೆಗೂ ಅಧಿಕಾರದಲ್ಲಿದ್ದವರು ಈಗ ಕಾಶ್ಮೀರದ ವಿಷಯದಲ್ಲಿ ಯು ಟರ್ನ್ ತೆಗೆದುಕೊಂಡಿದ್ದಾರೆ. ಕಾಶ್ಮೀರದ ಸ್ವಾತಂತ್ರ್ಯಕ್ಕೆ ದನಿಗೂಡಿಸಿದ್ದಾರೆ. ಕಾಶ್ಮೀರದ ರಕ್ಷಣೆಗಾಗಿ ತ್ಯಾಗ ಬಲಿದಾನ ಮಾಡಿದ ನಮ್ಮ ಸೈನಿಕರ ತ್ಯಾಗಕ್ಕೆ ಬೆಲೆಯಿಲ್ಲವೇ?ಇದಕ್ಕೆ ಕಾಂಗ್ರೆಸ್ ಬೆಲೆ ತೆರಬೇಕಾಗುತ್ತದೆ ಎಂದರು.  ರಾಷ್ಟ್ರದ ಸುರಕ್ಷತೆ , ಏಕತೆ, ಅಖಂಡತೆ ವಿಚಾರದಲ್ಲಿ ರಾಜೀ ಇಲ್ಲ. ಸರ್ದಾರ್ ವಲ್ಲಭಾಯಿ ಪಟೇಲ್ ಅವರು ರಾಷ್ಟ್ರದ ಐಕ್ಯತೆಗಾಗಿ ಶ್ರಮಿಸಿದರು ಎಂದು ಸ್ಮರಿಸಿದರು.   ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತಿತರರು ಇದ್ದರು.

Facebook Comments

Sri Raghav

Admin