ಬೆಂಗಳೂರಲ್ಲಿ ಜೆಸಿಬಿಗಳ ಘರ್ಜನೆ : ನಿರ್ಧಾಕ್ಷಿಣ್ಯವಾಗಿ ರಾಜಕಾಲುವೆ ಒತ್ತುವರಿ ತೆರವು

ಈ ಸುದ್ದಿಯನ್ನು ಶೇರ್ ಮಾಡಿ

Rajakaluve-1

ಬೆಂಗಳೂರು, ಆ.6-ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ್ದ ಸುಮಾರು 32ಕ್ಕೂ ಹೆಚ್ಚು ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಬೆಳ್ಳಂಬೆಳಗ್ಗೆ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಜೆಸಿಬಿಗಳು ಘರ್ಜಿಸಿದವು.ಯಾರ ಮುಲಾಜಿಗೂ ಯಾವ ಆರ್ತನಾದಕ್ಕೂ ಮರುಗದೇ  ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ್ದ ಕಟ್ಟಡಗಳು ಬೇಲಿ ಹಾಕಿದ್ದ ನಿವೇಶನಗಳು ಎಲ್ಲವನ್ನೂ ತೆರವುಗೊಳಿಸಿ ರಾಜಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯುವಂತೆ ಬಿಬಿಎಂಪಿ ಅಧಿಕಾರಿಗಳು ಮಾಡಿದರು.  ಇತ್ತೀಚೆಗೆ ಮಳೆ ಬಿದ್ದು ಕೋಡಿ ಚಿಕ್ಕನಹಳ್ಳಿ, ಸಾರಕ್ಕಿ ಕೆರೆ ಸುತ್ತಮುತ್ತಲ ಪ್ರದೇಶಗಳು ಜಲಾವೃತಗೊಂಡು ಜನ ಸಂಕಷ್ಟಕ್ಕೀಡಾಗಿದ್ದರು.  ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡಗಳ ನಿರ್ಮಾಣ ಮಾಡಿಕೊಂಡಿದ್ದಕ್ಕೆ ನೀರು ಸರಾಗವಾಗಿ ಹರಿಯಲಾಗದೆ ಮನೆ, ಅಪಾರ್ಟ್‍ಮೆಂಟ್‍ಗಳಿಗೆ ನೀರು ನುಗ್ಗಿ ಕೆರೆ ತುಂಬಿ ಹರಿದು ಅವಾಂತರ ಸೃಷ್ಟಿಸಿತ್ತು. ನಗರವೆಲ್ಲಾ ನದಿಯಂತಾಗಿತ್ತು.  ಮಳೆ ಬಂದಾಗಲೆಲ್ಲಾ ಈ ಸಮಸ್ಯೆ ನಗರವನ್ನು ಕಾಡುತ್ತಿತ್ತು.

Rajakaluve-3

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಬಿಬಿಎಂಪಿ, ಬಿಡಿಎ, ಬಿಡಬ್ಲ್ಯುಎಸ್‍ಎಸ್‍ಬಿ, ಬಿಎಂಟಿಎಫ್ ಅಧಿಕಾರಿಗಳ ಸಭೆ ನಡೆಸಿ ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಖಡಕ್ ಆದೇಶ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಬಿಬಿಎಂಪಿ ಅಧಿಕಾರಿಗಳು ಇಂದು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೆತ್ತಿಕೊಂಡು ನಗರದ ನಾಲ್ಕು ದಿಕ್ಕುಗಳಲ್ಲಿ ಏಕಕಾಲಕ್ಕೆ ಒತ್ತುವರಿ ತೆರವು ಮಾಡಿದರು. ಮೊದಲೇ 1100 ಮೀಟರ್ ಒತ್ತುವರಿಯಾಗಿರುವುದನ್ನು ಗುರುತಿಸಿದ್ದ ಅದರಂತೆ ರಾಜಕಾಲುವೆ ಮೇಲೆ 32 ಕಟ್ಟಡಗಳನ್ನು ಕಟ್ಟಲಾಗಿತ್ತು. ಯಲಹಂಕದ ಕೆಂಪೇಗೌಡ ವಾರ್ಡ್‍ನ  ಶಿವನಹಳ್ಳಿ, ಬೊಮ್ಮನಹಳ್ಳಿ ವಲಯದ ಅವನಿ ಶೃಂಗೇರಿನಗರದ 9 ಕಟ್ಟಡಗಳ ತೆರವು, 8 ಖಾಲಿ ನಿವೇಶನಗಳ ತೆರವು, ಕಸವನಹಳ್ಳಿ ಕೆರೆಯಿಂದ ಕೈಗೊಂಡನಹಳ್ಳಿ ಚೋಳನಕೆರೆ ವರೆಗೆ ಒಟ್ಟು 7,500 ಚದರಡಿ ಒತ್ತುವರಿಯಾಗಿದ್ದ ಜಾಗ ಹಾಗೂ ನಿವೇಶಗಳನ್ನು ತೆರವು ಮಾಡಲಾಯಿತು.

Rajakaluve-4

ಜಂಟಿ ಆಯುಕ್ತ ಮುನಿವೀರಪ್ಪ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. ಮೇಯರ್ ಮಂಜುನಾಥರೆಡ್ಡಿ ಸ್ಥಳದಲ್ಲಿದ್ದರು. ರಕ್ಷಣೆ ಹಾಗೂ ಭದ್ರತೆಗೆ 100ಕ್ಕೂ ಹೆಚ್ಚು ಪೊಲೀಸ್ ಹಾಗೂ ಬಿಎಂಟಿಎಫ್ ಸಿಬ್ಬಂದಿ ಹಾಜರಿದ್ದರು.  ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಮನೆ ಕಟ್ಟಿದವರು ಅಧಿಕಾರಿಗಳ ಬಳಿ ಕಟ್ಟಡಗಳನ್ನು ತೆರವುಗೊಳಿಸದಂತೆ ಅಲವತ್ತುಕೊಂಡರೂ ಯಾವುದೇ ಮುಲಾಜಿಗೊಳಗಾಗದೆ ಅಧಿಕಾರಿಗಳು ಕಟ್ಟಡಗಳನ್ನು ತೆರವುಗೊಳಿಸಿದರು.

Rajakaluve-2

ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ  ಹೈಕೋರ್ಟ್ ಕೂಡ ಸರ್ಕಾರಕ್ಕೆ  ಆದೇಶ ನೀಡಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಭವಿಷ್ಯದ ಬೆಂಗಳೂರಿನಲ್ಲಿ ಸಂಭವನೀಯ ಅನಾಹುತಗಳನ್ನು ತಪ್ಪಿಸಲು ಒತ್ತುವರಿ ತೆರವು ಅನಿವಾರ್ಯವಾಗಿದೆ ಎಂದು ತಿಳಿಸಿದರು.  ಕಸವನಹಳ್ಳಿ ಬಳಿಯ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಆರು ಮನೆಗಳು ಭಾಗಶಃ ಡ್ಯಾಮೇಜ್ ಆಗಿವೆ. ಮಹದೇವಪುರ ವಲಯದ ಶುಭ ಎನ್‍ಕ್ಲೇವ್ ಬಡಾವಣೆಯಲ್ಲಿ ಒತ್ತುವರಿಯಾಗಿದ್ದ ನೀರ್ಗಲುವೆ ಪ್ರದೇಶವನ್ನು ತೆರವುಗೊಳಿಸಲಾಯಿತು.

ಬೆಂಗಳೂರು, ಆ.6-ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ್ದ ಸುಮಾರು 32ಕ್ಕೂ ಹೆಚ್ಚು ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಬೆಳ್ಳಂಬೆಳಗ್ಗೆ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಜೆಸಿಬಿಗಳು ಘರ್ಜಿಸಿದವು.
ಯಾರ ಮುಲಾಜಿಗೂ ಯಾವ ಆರ್ತನಾದಕ್ಕೂ ಮರುಗದೇ  ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ್ದ ಕಟ್ಟಡಗಳು ಬೇಲಿ ಹಾಕಿದ್ದ ನಿವೇಶನಗಳು ಎಲ್ಲವನ್ನೂ ತೆರವುಗೊಳಿಸಿ ರಾಜಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯುವಂತೆ ಬಿಬಿಎಂಪಿ ಅಧಿಕಾರಿಗಳು ಮಾಡಿದರು.  ಇತ್ತೀಚೆಗೆ ಮಳೆ ಬಿದ್ದು ಕೋಡಿ ಚಿಕ್ಕನಹಳ್ಳಿ, ಸಾರಕ್ಕಿ ಕೆರೆ ಸುತ್ತಮುತ್ತಲ ಪ್ರದೇಶಗಳು ಜಲಾವೃತಗೊಂಡು ಜನ ಸಂಕಷ್ಟಕ್ಕೀಡಾಗಿದ್ದರು.  ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡಗಳ ನಿರ್ಮಾಣ ಮಾಡಿಕೊಂಡಿದ್ದಕ್ಕೆ ನೀರು ಸರಾಗವಾಗಿ ಹರಿಯಲಾಗದೆ ಮನೆ, ಅಪಾರ್ಟ್‍ಮೆಂಟ್‍ಗಳಿಗೆ ನೀರು ನುಗ್ಗಿ ಕೆರೆ ತುಂಬಿ ಹರಿದು ಅವಾಂತರ ಸೃಷ್ಟಿಸಿತ್ತು. ನಗರವೆಲ್ಲಾ ನದಿಯಂತಾಗಿತ್ತು.  ಮಳೆ ಬಂದಾಗಲೆಲ್ಲಾ ಈ ಸಮಸ್ಯೆ ನಗರವನ್ನು ಕಾಡುತ್ತಿತ್ತು.


ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಬಿಬಿಎಂಪಿ, ಬಿಡಿಎ, ಬಿಡಬ್ಲ್ಯುಎಸ್‍ಎಸ್‍ಬಿ, ಬಿಎಂಟಿಎಫ್ ಅಧಿಕಾರಿಗಳ ಸಭೆ ನಡೆಸಿ ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಖಡಕ್ ಆದೇಶ ನೀಡಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಬಿಬಿಎಂಪಿ ಅಧಿಕಾರಿಗಳು ಇಂದು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೆತ್ತಿಕೊಂಡು ನಗರದ ನಾಲ್ಕು ದಿಕ್ಕುಗಳಲ್ಲಿ ಏಕಕಾಲಕ್ಕೆ ಒತ್ತುವರಿ ತೆರವು ಮಾಡಿದರು.
ಮೊದಲೇ 1100 ಮೀಟರ್ ಒತ್ತುವರಿಯಾಗಿರುವುದನ್ನು ಗುರುತಿಸಿದ್ದ ಅದರಂತೆ ರಾಜಕಾಲುವೆ ಮೇಲೆ 32 ಕಟ್ಟಡಗಳನ್ನು ಕಟ್ಟಲಾಗಿತ್ತು. ಯಲಹಂಕದ ಕೆಂಪೇಗೌಡ ವಾರ್ಡ್‍ನ  ಶಿವನಹಳ್ಳಿ, ಬೊಮ್ಮನಹಳ್ಳಿ ವಲಯದ ಅವನಿ ಶೃಂಗೇರಿನಗರದ 9 ಕಟ್ಟಡಗಳ ತೆರವು, 8 ಖಾಲಿ ನಿವೇಶನಗಳ ತೆರವು, ಕಸವನಹಳ್ಳಿ ಕೆರೆಯಿಂದ ಕೈಗೊಂಡನಹಳ್ಳಿ ಚೋಳನಕೆರೆ ವರೆಗೆ ಒಟ್ಟು 7,500 ಚದರಡಿ ಒತ್ತುವರಿಯಾಗಿದ್ದ ಜಾಗ ಹಾಗೂ ನಿವೇಶಗಳನ್ನು ತೆರವು ಮಾಡಲಾಯಿತು.

ಜಂಟಿ ಆಯುಕ್ತ ಮುನಿವೀರಪ್ಪ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. ಮೇಯರ್ ಮಂಜುನಾಥರೆಡ್ಡಿ ಸ್ಥಳದಲ್ಲಿದ್ದರು. ರಕ್ಷಣೆ ಹಾಗೂ ಭದ್ರತೆಗೆ 100ಕ್ಕೂ ಹೆಚ್ಚು ಪೆÇಲೀಸ್ ಹಾಗೂ ಬಿಎಂಟಿಎಫ್ ಸಿಬ್ಬಂದಿ ಹಾಜರಿದ್ದರು.  ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು.  ಮನೆ ಕಟ್ಟಿದವರು ಅಧಿಕಾರಿಗಳ ಬಳಿ ಕಟ್ಟಡಗಳನ್ನು ತೆರವುಗೊಳಿಸದಂತೆ ಅಲವತ್ತುಕೊಂಡರೂ ಯಾವುದೇ ಮುಲಾಜಿಗೊಳಗಾಗದೆ ಅಧಿಕಾರಿಗಳು ಕಟ್ಟಡಗಳನ್ನು ತೆರವುಗೊಳಿಸಿದರು.  ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ  ಹೈಕೋರ್ಟ್ ಕೂಡ ಸರ್ಕಾರಕ್ಕೆ  ಆದೇಶ ನೀಡಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಭವಿಷ್ಯದ ಬೆಂಗಳೂರಿನಲ್ಲಿ ಸಂಭವನೀಯ ಅನಾಹುತಗಳನ್ನು ತಪ್ಪಿಸಲು ಒತ್ತುವರಿ ತೆರವು ಅನಿವಾರ್ಯವಾಗಿದೆ ಎಂದು ತಿಳಿಸಿದರು. ಕಸವನಹಳ್ಳಿ ಬಳಿಯ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಆರು ಮನೆಗಳು ಭಾಗಶಃ ಡ್ಯಾಮೇಜ್ ಆಗಿವೆ. ಮಹದೇವಪುರ ವಲಯದ ಶುಭ ಎನ್‍ಕ್ಲೇವ್ ಬಡಾವಣೆಯಲ್ಲಿ ಒತ್ತುವರಿಯಾಗಿದ್ದ ನೀರ್ಗಲುವೆ ಪ್ರದೇಶವನ್ನು ತೆರವುಗೊಳಿಸಲಾಯಿತು.

ಮನೆ ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ  ಭರವಸೆ

ಬೆಂಗಳೂರು, ಆ.6-ಸರ್ಕಾರದ ಜಾಗವನ್ನು ಒತ್ತುವರಿ ಮಾಡಿ ಲೇಔಟ್‍ಗಳನ್ನು ನಿರ್ಮಿಸಿ ಮಾರಾಟ ಮಾಡಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಅಮಾಯಕರು ಬಲಿಯಾಗಿದ್ದಾರೆ. ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರ್ಯಾಯವ್ಯವಸ್ಥೆ ಅಥವಾ ಪರಿಹಾರ ಕಲ್ಪಿಸುವುದಾಗಿ ಶಾಸಕ ಸತೀಶ್‍ರೆಡ್ಡಿ ತಿಳಿಸಿದ್ದಾರೆ.  ಬೊಮ್ಮನಹಳ್ಳಿ ವಲಯದಲ್ಲಿ ಬಿಬಿಎಂಪಿ ರಾಜಕಾಲುವೆ ಒತ್ತುವರಿ  ಸಂದರ್ಭದಲ್ಲಿ ಮನೆ ಕಳೆದುಕೊಂಡ ಸಾರ್ವಜನಿಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒತ್ತುವರಿ ಮಾಡುವವರು ಅಮಾಯಕರಿಗೆ ಮಾರಾಟ ಮಾಡಿ ಹೋಗಿದ್ದಾರೆ. ಅದನ್ನು ಕೊಂಡವರು ಮನೆಗಳನ್ನು ನಿರ್ಮಿಸಿಕೊಂಡು ಈಗ ಮನೆ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ನೋಡಿದರೆ ನನಗೂ ದುಃಖವಾಗುತ್ತದೆ. ಆದರೆ ನಾನು ಅಸಹಾಯಕ. ಸರ್ಕಾರದ ಆದೇಶದಂತೆ ರಾಜಕಾಲುವೇ ತೆರವು ಮಾಡಲೇಬೇಕಾಗಿದೆ ಎಂದರು.  ಸೋಮವಾರ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ರಾಜಕಾಲುವೆ ಒತ್ತುವರಿ ತೆರವು ಸ್ಥಗಿತಗೊಳಿಸಲ್ಲ : ಮಂಜುನಾಥರೆಡ್ಡಿ

Facebook Comments

Sri Raghav

Admin