ಬೆಂಗಳೂರಲ್ಲಿ ದೀಪಿಕಾ ದೀಪಾವಳಿ

ಈ ಸುದ್ದಿಯನ್ನು ಶೇರ್ ಮಾಡಿ

eepika-Diwali

ದೀಪಿಕಾ ಪಡುಕೋಣೆ ಭಾರತ ಚಿತ್ರರಂಗದಲ್ಲಿ ಉಜ್ವಲ ದೀಪದಂತೆ ಬೆಳಗುತ್ತಿರುವ ಮಹಾತಾರೆ. ಹಾಲಿವುಡ್‍ನಲ್ಲೂ ಮಿಂಚಿರುವ ದೀಪಿಕಾ ಈಗ ಅನೇಕ ಪ್ರಾಜೆಕ್ಟ್‍ಗಳಲ್ಲಿ ಬ್ಯುಸಿ. xXx: The Return of Xander Cage  ಇಂಗ್ಲಿಷ್ ಸಿನಿಮಾದ ಪ್ರಮೋಷನ್ ಜೊತೆಗೆ ಬಹು ನಿರೀಕ್ಷಿತ ಪದ್ಮಾವತಿ ಚಿತ್ರಕ್ಕಾಗಿ ಸಿದ್ದತೆಯಲ್ಲಿರುವ ಡಿಪ್ಪಿಗೆ ಬಿಡುವೆಂಬುದೇ ಇಲ್ಲ. ಶೀಘ್ರದಲ್ಲೇ ಆರಂಭವಾಗುವ ಹೊಸ ಪ್ರಾಜೆಕ್ಟ್‍ಗೆ ಮುನ್ನ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲು ಡಿಪ್ಪಿ ಬಿಡುವು ಮಾಡಿಕೊಂಡು ಬೆಂಗಳೂರಿಗೆ ಬಂದಿದ್ದಾಳೆ.

ದೀಪಾವಳಿ ಬೆಳಕಿನ ಹಬ್ಬ, ಸಂತೋಷ ಮತ್ತು ಸಡಗರ-ಸಂಭ್ರಮದ ಪ್ರತೀಕ. ನಮಗೆಲ್ಲ ಇದು ಅತ್ಯಂತ ವಿಶೇಷ ಹಬ್ಬ. ಪದ್ಮಾವತಿ ಸಿನಿಮಾಗೆ ಮುನ್ನ ಕೆಲಕಾಲ ನನ್ನ ಕುಟುಂಬದೊಂದಿಗೆ ಇರಲು ನಾನು ನಿರ್ದೇಶಿಸಿದ್ದೇನೆ ಎಂದು ಡಿಪ್ಪಿ ಹೇಳಿದ್ದಾರೆ. ಆಸಕ್ತಿಕರ ಸಂಗತಿ ಎಂದರೆ ದೀಪಿಕಾ ಕುಟುಂಬದ ಸದಸ್ಯರ ಹೆಸರೆಲ್ಲವೂ ಬೆಳಕಿಗೆ ಅನ್ವರ್ಥವಾಗಿವೆ. ತಂದೆ ಪ್ರಕಾಶ್, ತಾಯಿ ಉಜ್ಜಲ ಮತ್ತು ತಂಗಿ ಅನಿಶಾ. ಇನ್ನು ದೀಪಿಕಾ ಹೆಸರಿನಲ್ಲೇ ದೀಪವಿದೆ.ಹೀಗಾಗಿ ದೀಪಾವಳಿ ಡಿಪ್ಪಿಗೆ ತುಂಬಾ ಮಹತ್ವದ ಹಬ್ಬ. ತನ್ನ ಕುಟುಂಬದೊಂದಿಗೆ ಹಬ್ಬದ ಸಡಗರ-ಸಂಭ್ರಮದಲ್ಲಿ ದೀಪಿಕಾ ತೇಲುತ್ತಿದ್ದಾಳೆ.

► Follow us on –  Facebook / Twitter  / Google+

Facebook Comments

Sri Raghav

Admin